ಬಂಟ್ವಾಳ: ನಾಪತ್ತೆಯಾಗಿದ್ದ ಸರಕಾರಿ ಅಧಿಕಾರಿ ಶವವಾಗಿ ಪತ್ತೆ
ಬಂಟ್ವಾಳ: ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸರ್ಕಾರಿ ಅಧಿಕಾರಿಯೊಬ್ಬರ ಶವ ಮಾರ್ಚ್ 31ರ ಭಾನುವಾರ ಸಂಜೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆ ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿದೆ.ಅಮ್ಟಾಡಿ ಗ್ರಾ.ಪಂ.ಕಾರ್ಯದರ್ಶಿ ಲಕ್ಮೀನಾರಾಯಣ ಮಾರ್ಚ್ 27ರಂದು ಚುನಾವಣಾ ಕರ್ತವ್ಯದ ವೇಳೆ ನಾಪತ್ತೆಯಾಗಿದ್ದರು. ಅವರು ಕರ್ತವ್ಯಕ್ಕೆ ಹಾಜರಾಗದೇ ನಾಪತ್ತೆಯಾಗಿರುವ ಬಗ್ಗೆ ಸಂಶಯಗೊಂಡು ಅವರ ಕುಟುಂಬವು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.ಮಾರ್ಚ್ 27 ರಂದು ಮಧ್ಯಾಹ್ನ ಲಕ್ಮೀನಾರಾಯಣ ಅವರು ತಮ್ಮ ಕಚೇರಿಯಿಂದ ಹೊರಬಂದ ನಂತರ ಅವರ ಫೋನ್ ಸ್ವಿಚ್ ಆಫ್ ಆಗಿರುವುದು ಕಂಡು ಮನೆಯವರಲ್ಲಿ ಆತಂಕವನ್ನು ಹೆಚ್ಚಿಸಿತು. ಹೀಗಾಗಿ ಅವರ ಕಿರಿಯ ಸಹೋದರ ಅವರು ಕಣ್ಮರೆಯಾದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಚುನಾವಣೆಗೆ ಎಸ್‌ಎಸ್‌ಟಿ ತಂಡದಲ್ಲಿದ್ದ ಲಕ್ಮಿನಾರಾಯಣ ಅವರು ಈ ಹಿಂದೆ ಕರ್ತವ್ಯಕ್ಕೆ ಗೈರಾಗಿದ್ದರಿಂದ ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗೆ ದೂರು ನೀಡಲಾಗಿತ್ತು.ಬೆಳ್ತಂಗಡಿಯಲ್ಲಿ ಮೋಟಾರ್ ಸೈಕಲ್ ಪತ್ತೆಯಾದ ನಂತರ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ. ಮಾರ್ಚ್ 30 ರಂದು, ಪೊಲೀಸರು ಪಟ್ರಮೆ ಸುತ್ತಮುತ್ತಲಿನ ಪ್ರದೇಶದಲ್ಲಿ ಆತನ ಮೊಬೈಲ್ ಸಿಗ್ನಲ್ ಅನ್ನು ಪತ್ತೆಹಚ್ಚಿದರು, ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದರು.ಆದರೆ, ಭಾನುವಾರ ಆತನ ಶವವನ್ನು ಸ್ಥಳೀಯ ಶೌರ್ಯ ತಂಡ ನದಿಯಿಂದ ಹೊರತೆಗೆದಿದ್ದಾರೆ.