ಮಂಗಳೂರು: ಭಾರತೀಯ ಜನತಾ ಪಕ್ಷದ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ಇದರ ದಕ್ಷಿಣಾ ಕನ್ನಡ ಜಿಲ್ಲಾ ಸಮಿತಿಯ ರಚನೆಯು ಮಾರ್ಚ್ 28 ರಂದು ದ.ಕ ಲೊಕಸಭಾ ಚುನಾವಣಾ ಕಚೇರಿಯಲ್ಲಿ ನಡೆಯಿತು.
ಕಲೆ ಹಾಗೂ ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಭಾರತೀಯ ಜನತಾ ಪಾರ್ಟಿಯು ಮೊದಲ ಆದ್ಯತೆ ನೀಡುತ್ತಿದೆ ಹಾಗಾಗಿ ಕಲಾವಿದರೆಲ್ಲ ಬಿಜೆಪಿ ಯನ್ನು ಬೆಂಬಲಿಸಬೇಕೆಂದು ದ.ಕ ಜಿಲ್ಲಾ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಜಿಲ್ಲಾ ಸಂಚಾಲಕರಾದ ರಾಜ್ಯ ಪ್ರಶಸ್ತಿ ವಿಜೇತ ಅಶೋಕ್ ಶೆಟ್ಟಿ ಸರಪಾಡಿ ಹೇಳಿದರು.
ವೇದಿಕೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರು ಸುಧೀರ್ ಶೆಟ್ಟಿ ಕಣ್ಣೂರು, ಪ್ರಕೋಷ್ಟಗಳ ಸಹ ಸಂಯೋಜಕ ಪ್ರಸನ್ನ ದರ್ಬೆ, ಲಕುಮಿ ತಂಡದ ಲಯನ್ ಕಿಶೋರ್ ಡಿ ಶೆಟ್ಟಿ, ಸಸಿಹಿತ್ಲು ಮೇಳದ ಸಂಚಾಲಕರಾದ ರಾಜೇಶ್ ಗುಜಾರನ್, ಬಪ್ಪನಾಡು ಮೇಳದ ಸಂಚಾಲಕರಾದ ವಿನೋದ್ ಕುಮಾರ್ ಬಜ್ಪೆ, ಜಿಲ್ಲಾ ಸಹ ಸಂಚಾಲಕರಾದ ಚೇತಕ್ ಪೂಜಾರಿ ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿಗೆ ಪುತ್ತೂರು ಮಂಡಲದಿಂದ ನಟ ಸುಂದರ್ ರೈ ಮಂದಾರ, ಮೂಡಬಿದ್ರೆ ಮಂಡಲದಿಂದ ರಾಜಾರಾಮ್ ನಾಗರಕಟ್ಟೆ, ಸುಳ್ಯ ಮಂಡಲದಿಂದ ರೋಹಿತ್ ಎಸ್ ಸುಳ್ಯ, ಬಂಟ್ವಾಳ ಮಂಡಲದಿಂದ ಮಧು ಬಂಗೇರ ಕಲ್ಲಡ್ಕ, ಮಂಗಳೂರು (ಉಳ್ಳಾಲ) ಮಂಡಲದಿಂದ ಮಲ್ಲಿಕಾ ಉಳ್ಳಾಲ ಬೈಲು, ಮಂಗಳೂರು ದಕ್ಷಿಣಾ ಮಂಡಲದಿಂದ ಚೇತಕ್ ಪೂಜಾರಿ ಮಹಾಕಾಳಿ ಪಡ್ಪು, ಮಂಗಳೂರು ಉತ್ತರ ಮಂಡಲದಿಂದ ಯಾದವ ಕೋಟ್ಯಾನ್ ಕುಂಜತ್ ಬೈಲ್, ಬೆಳ್ತಂಗಡಿ ಮಂಡಲ ದಿಂದ ಜಯರಾಂ ನಾಯರ್ ಮುಂಡಾಜೆ ಇವರಿಗೆ ಜವಾಬ್ದಾರಿ ನೀಡಲಾಯಿತು.
ಮೊದಲಿಗೆ ಪ್ರಸನ್ನ ದರ್ಬೆ ಪ್ರಸ್ತಾಪಿಸಿ ಸ್ವಾಗತಿಸಿದರು, ಚೇತಕ್ ಪೂಜಾರಿ ನಿರೂಪಿಸಿ ಧನ್ಯವಾದವಿತ್ತರು.