ಮಂಗಳೂರು: ಲೋಕಸಭೆ ಚುನಾವಣೆ ಹಿನ್ನಲೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಗಡಿಪಾರಾಗುತ್ತಿರುವ ಕ್ರಿಮಿನಲ್ ಹಿನ್ನಲೆಯುಳ್ಳ ಆರೋಪಿಗಳ ಸಂಖ್ಯೆ ಇದೀಗ 61ಕ್ಕೆ ಏರಿಕೆಯಾಗಿದೆ.
ನಿನ್ನೆ ಮತ್ತೆ 13 ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ. ಮತ್ತೆ ನಾಲ್ವರು ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮವಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಂಗಳವಾರ ತಿಳಿಸಿದ್ದಾರೆ.
ಈ ಬಾರಿ ಗಡಿಪಾರಾದವರು ಬೋಳಾರ ಪಾದೆಕಲ್ಲುವಿನ ಜ್ನಾನೇಶ್ ನಾಯಕ್ (25), ಕುದ್ರೋಳಿಯ ಫಹಾದ್ ಅಲಿಯಾಸ್ ಅಬ್ದುಲ್ ಫಹಾದ್ (25), ಉಳ್ಳಾಲ ಮೊಗವೀರ ಪಟ್ಣದ ಧನುಷ್ ಅಲಿಯಾಸ್ ರಮಿತ್ ರಾಜ್ (30), ಕಾವೂರು ಶಾಂತಿನಗರದ ಮೊಹಮ್ಮದ್ ಸುಹೇಬ್ (28), ಮೂಡುಶೆಡ್ಡೆ ನಿಸರ್ಗಧಾಮ ನಗರದ ದೀಪಕ್ ಪೂಜಾರಿ ಅಲಿಯಾಸ್ ದೀಪು (38), ಕಾಟಿಪಳ್ಳ ಕೃಷ್ಣಾಪುರದ ಸಾಹಿಲ್ ಇಸ್ಮಾಯಿಲ್ (27), ಉಳ್ಳಾಲ ಬಸ್ತಿಪಡ್ಪುವಿನ ಮೊಹಮ್ಮದ್ ಶಾಕಿರ್ ಅಲಿಯಾಸ್ ಜಕೀರ ಹುಸೇನ್ ಅಲಿಯಾಸ್ ಮುನ್ನಾ (30), ಉಳ್ಳಾಲ ಮೇಲಂಗಡಿಯ ಇಬ್ರಾಹಿಂ ಖಲೀಲ್ (22), ಕುದ್ರೋಳಿ ಕರ್ನಲ್ ಗಾರ್ಡನ್‌ನ ಧನುಷ್ (28), ನಂತೂರ್ ಬಜಾಲ್‌ನ ನೌಫಾಲ್ (35), ಮರೋಳಿಯ ಹವಿತ್ ಪೂಜಾರಿ (28), ಅರ್ಕುಳ ಫರಂಗಿಪೇಟಯ ಕೌಶಿಕ್ ನಿಹಾಲ್ (24) ಹಾಗೂ ಬೆಳುವಾಯಿಯ ಸಂತೋಷ್ ಶೆಟ್ಟಿ (34) ಗಡಿಪಾರಿಗೆ ಒಳಗಾದವರು’ ಎಂದರು. ಚುನಾವಣೆ ಸಲುವಾಗಿ ಈಚೆಗೆ 48 ಮಂದಿಯನ್ನು ಗಡಿಪಾರು ಮಾಡಲಾಗಿತ್ತು. ಈಗ ಈ ಸಂಖ್ಯೆ 61ಕ್ಕೆ ಏರಿದೆ.
ಪ್ರಸ್ತುತ ಸೋಮೇಶ್ವರದ ನೆಹರೂ ನಗರದಲ್ಲಿ ವಾಸವಿರುವ ಅಂಬ್ಲಮೊಗರುವಿನ ಹೇಮಚಂದ್ರ ಅಲಿಯಾಸ್ ಪ್ರಜ್ವಲ್ ಪೂಜಾರಿ (29), ಕೈರಂಗಳ ಗ್ರಾಮದ ನವಾಜ್ (36), ಕುದ್ರೋಳಿಯ ಅನೀಶ್ ಅಶ್ರಫ್ (26), ಬೋಳೂರಿನ ಚರಣ್ ಅಲಿಯಾಸ್ ಚರಣ್ ಶೇಟ್ (39) ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮವಹಿಸಲಾಗಿದೆ. ಹೇಮಚಂದ್ರ 17 ಪ್ರಕರಣಗಳಲ್ಲಿ, ನವಾಜ್ 13, ಅನೀಶ್ 18, ಚರಣ್ 11 ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾರೆ’ ಎಂದು ಕಮಿಷನರ್ ಮಾಹಿತಿ ನೀಡಿದರು.