ಬಿಜೆಪಿ ಮಂಗಳೂರು ದಕ್ಷಿಣದ ಸಾಮಾಜಿಕ ಜಾಲತಾಣದ ಪದಗ್ರಹಣ ಕಾರ್ಯಕ್ರಮವು ಅಟಲ್ ಸೇವಕೇಂದ್ರದಲ್ಲಿ ನಡೆಯಿತು. ಪ್ರಾಸ್ತಾವಿಕ ಭಾಷಣವನ್ನು ಸಾಮಾಜಿಕ ಜಾಲತಾಣದ ಸಹ ಸಂಚಾಲಕರಾದ ಸಾಯಿ ಪ್ರಸಾದ್ ಶೆಟ್ಟಿ ಅವರು ಮಾಡಿದರು.
ಮುಖ್ಯ ಭಾಷಣಗಾರರಾಗಿ ಮಾತನಾಡಿದ ಮಂಗಳೂರು ದಕ್ಷಿಣದ ಶಾಸಕರಾದ ವೇದಾವ್ಯಾಸ ಕಾಮತ್ ರವರು ಇಂದಿನ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣದ ಮಹತ್ವ ಹೆಚ್ಚಿದ್ದು,ವಿಶೇಷವಾಗಿ ರಾಜಕೀಯ ಪಕ್ಷಗಳಿಗೆ ಸಾಮಾಜಿಕ ಮಾಧ್ಯಮವು ಅತ್ಯಗತ್ಯವಾಗಿದೆ. ಮತ್ತು ನೂತನ ಪದಾಧಿಕಾರಿಗಳಿಗೆ ಮಾರ್ಗದರ್ಶನ ಮತ್ತು ಸಲಹೆ ಸೂಚನೆಗಳನ್ನು ನೀಡಿದರು.
ಅಧ್ಯಕ್ಷತೆ ಭಾಷಣವನ್ನು ರಮೇಶ್ ಕಂಡೆಟ್ಟು ಅವರು ಮಾಡಿದರು. ನೂತನ ಪದಾಧಿಕಾರಿಗಳಿಗೆ ಪಕ್ಷದ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ವಿವರಣೆ ನೀಡಿದರು.
ಈ ಸಂಧರ್ಭದಲ್ಲಿ ಮಂಗಳೂರು ಚುನಾವಣಾ ಮಂಡಲದ ಲೋಕಸಭಾ ಸಂಚಾಲಕರಾದ ವಿಜಯ್ ಕುಮಾರ್ ಶೆಟ್ಟಿ,
ಮಂಡಲದ ಪ್ರಧಾನ ಕಾರ್ಯದರ್ಶಿಗಳದ ಲಲ್ಲೇಶ್ ಕುಮಾರ್ ಹಾಗೂ ರಮೇಶ್ ಹೆಗ್ಡೆ, ಸಾಮಾಜಿಕ ಜಾಲತಾಣದ ಸಂಚಾಲಕರಾದ ಶಬರೀಶ್, ಮಂಗಳೂರು ದಕ್ಷಿಣ ಮಂಡಲದ ಸಾಮಾಜಿಕ ಜಾಲತಾಣದ ಪ್ರಮುಖರು ಉಪಸ್ಥಿತರಿದ್ದರು.