ಇನ್ಮುಂದೆ ಕಾರಿನ ಹಿಂಬದಿ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯವಾಗಿದೆ. ಒಂದು ವೇಳೆ ಸೀಟ್ ಬೆಲ್ಟ್ ಧರಿಸದಿದ್ರೆ 1000 ದಂಡ ವಿಧಿಸಲಾಗುತ್ತದೆ.
ಸಾರಿಗೆ ಸಚಿವಾಲಯ ಹೊರಡಿಸಿದ ಕರಡು ಅಧಿಸೂಚನೆಯ ಪ್ರಕಾರ, ಏಪ್ರಿಲ್ 1, 2025 ರಿಂದ ತಯಾರಾದ ಎಲ್ಲಾ ಕಾರುಗಳು ‘ರಿಯರ್ ಸೀಟ್ ಬೆಲ್ಟ್ ಅಲಾರಂ’ ಅನ್ನು ಒದಗಿಸಬೇಕಾಗುತ್ತದೆ.
ಅಲ್ಲದೇ ಕಾರಿನ ಮುಂಬದಿ ಮಾತ್ರವಲ್ಲ ಹಿಂಬದಿ ಕುಳಿತವರು ಕೂಡ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕಾಗುತ್ತದೆ.
ನಿಯಮ ಉಲ್ಲಂಘನೆಗೆ ಈ ಹಿಂದೆ ಇದ್ದ ದಂಡದ ಮೊತ್ತವನ್ನು 500 ರೂ. ನಿಂದ 1 ಸಾವಿರ ರೂ.ಗೆ ಹೆಚ್ಚಿಸಿದೆ. ಬಾಡಿಗೆ ಅಥವಾ ಖಾಸಗಿ ಕಾರುಗಳಲ್ಲಿ ಚಾಲಕನ ಜತೆಗೆ ಸಹ ಪ್ರಯಾಣಿಕರೂ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕಿದೆ.
ಈಗಾಗಲೇ ಕಾರಿನ ಹಿಂಬದಿ ಪ್ರಯಾಣಿಕರೂ ಸೀಟ್ ಬೆಲ್ಟ್ ಧರಿಸಬೇಕೆಂಬ ನಿಯಮ ಜಾರಿಯಲ್ಲಿದೆ. ಇದನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿರುವ ಸರ್ಕಾರ 2025 ಏಪ್ರಿಲ್ 1ರಿಂದ ಮಾರಾಟವಾಗುವ ಕಾರುಗಳಲ್ಲಿ ಕಡ್ಡಾಯವಾಗಿ ರಿಯರ್ ಸೀಟ್ ಬೆಲ್ಟ್ ಅಲಾರಂ ಸೀಟ್ ಅಳವಡಿಸಬೇಕೆಂದು ಸೂಚನೆ ನೀಡಿದೆ.