ಬೆಳ್ತಂಗಡಿ: ಮನೆಯವರ ಕಣ್ಣು ತಪ್ಪಿಸಿ ಪುಟಾಣಿ ಮಗುವೊಂದು ರಸ್ತೆಗೆ ಓಡಿಬಂದ ಕಾರಣ ರಿಕ್ಷಾವೊಂದು ಡಿಕ್ಕಿ ಹೊಡೆದು ಮಗು ಸಾವನಪ್ಪಿದ ಘಟನೆ ಸೋಣಂದೂರು ಪಣಕಜೆ ಎಂಬಲ್ಲಿ ನಡೆದಿದೆ.
ಮೃತ ಪುಟಾಣಿಯನ್ನು ಮೂರು ವರ್ಷದ ಕೌಶಿಕ್ ಎಂದು ಗುರುತಿಸಲಾಗಿದೆ. ಮುಂಡಾಡಿಯಲ್ಲಿ ಚಂದ್ರಶೇಖರ್ ಅವರ ಮನೆ ರಸ್ತೆಯ ಹತ್ತಿರವಿದ್ದು, ಮನೆಯಲ್ಲಿದ್ದ ಮಗು ಮನೆಯವರು ನೋಡದೆ ಓಡಿ ರಸ್ತೆಗೆ ಬಂದಿದ್ದು, ಈ ವೇಳೆ ರಿಕ್ಷಾವೊಂದು ಮಗುವಿಗೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದರೂ, ಯಾವುದೇ ಪ್ರಯೋಜನವಾಗದೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.