ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ದಕ್ಷಿಣ ಕನ್ನಡ ಜಿಲ್ಲಾ ಪದಾಧಿಕಾರಿಗಳ ವಿಶೇಷ ಸಭೆಯು ನಗರದ ಓಷಿಯನ್ ಪರ್ಲ್ ಹೋಟೆಲ್ ನ ಸಭಾಂಗಣ ದಲ್ಲಿ ನಡೆಯಿತು.
ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣ ಗೌಡ್ರು, ಜಿಲ್ಲಾ ಅಧ್ಯಕ್ಷ ಲಯನ್ ಅನಿಲ್ ದಾಸ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಣ್ಣೀರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿನೋದ್ ಅಬ್ಬಿಗೆರೆ, ರಾಜ್ಯ ಉಪಾಧ್ಯಕ್ಷ ವೀರ ಭದ್ರಪ್ಪ, ಭಾಗವಹಿಸದ್ದರು.
ಜಿಲ್ಲಾ ಉಪಾಧ್ಯಕ್ಷ ಮಧುಸೂಧನ್ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು.
ತುಳು ಭಾಷೆ, ಆಚಾರ ವಿಚಾರ ಘನತೆ ಹಾಗೂ ಕನ್ನಡ ಸಂಸ್ಕೃತಿ ಬಗ್ಗೆ ಅನಿಲ್ ದಾಸ್ ಮಾತಾಡಿದರು.
ರಾಜಾಧ್ಯಕ್ಷ ರಾದ ಟಿ. ಎ. ನಾರಾಯಣ ಗೌಡ್ರು ಕನ್ನಡ ನಾಡು ನುಡಿ ತುಳುವಿನ ಬಗ್ಗೆ ಇರುವ ಬಾಂಧವ್ಯ, ತುಳು ನಾಡಿನ ಮಹಾನ್ ಸಾಧಕರ ಹಾಗೂ ಇತಿಹಾಸ ದ ಬಗ್ಗೆ ಮಾತಾಡಿದರು.
ಸಭೆಯಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು ಆಟೋ ಘಟಕ ಹಾಗೂ ಜಿಲ್ಲಾ ಕರವೇ ಮುಖಂಡರು ಉಪಸ್ಥಿತರಿದ್ದರು..
ಪ್ರಸಾದ ತೋಮಸ್,ರಾಜೇಶ್ ಶೆಟ್ಟಿಗಾರ್, ರಝಕ್, ಅರುಣ್ ಕುಮಾರ್, ಝೆರಾಲ್ಡ್, ಜೆ.ಕೆ.ಭಟ್ , ಕ್ಲೇ ಮೆಂಟ್, ಸಂತೋಷ್, ಭರತ್, ಸುಜಯ ಪೂಜಾರಿ,ಜಲೀಲ್, ರಿಯಾಜ್, ಫೈರೋಜ್,ಮೌಸೀರ್ ಸಮಾಣಿ ಗೆ, ಪಮ್ಮಿ ಕೊಡಿಯಾಲ್ ಬೈಲ್ ಮುಂತಾದ ಮುಖಂಡರು ಭಾಗವಹಿಸಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಅಟ್ಟಲೂರ್, ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.