Home ಕರಾವಳಿ ತುಳು ಚಿತ್ರ ಅಭಿಮಾನಿಗಳ ಅಪೇಕ್ಷೆಯ ಮೇರೆಗೆ ಮಾರ್ಚ್ 15 ರಿಂದ ಉಡುಪಿಯಲ್ಲಿ ಮತ್ತೆ ಪ್ರದರ್ಶನಗೊಳ್ಳಲಿದೆ...

ತುಳು ಚಿತ್ರ ಅಭಿಮಾನಿಗಳ ಅಪೇಕ್ಷೆಯ ಮೇರೆಗೆ ಮಾರ್ಚ್ 15 ರಿಂದ ಉಡುಪಿಯಲ್ಲಿ ಮತ್ತೆ ಪ್ರದರ್ಶನಗೊಳ್ಳಲಿದೆ “ಗೌಜಿ ಗಮ್ಮತ್” ತುಳು ಚಿತ್ರ

0

ಮಂಗಳೂರು: ಮೋವಿನ್ ಫಿಲಂಸ್ ಲಾಂಛನದಲ್ಲಿ ಮೋಹನ್ ಭಟ್ಕಳ್, ವಿನಾಯಕ್ ತೀರ್ಥಹಳ್ಳಿ ನಿರ್ಮಾಣದಲ್ಲಿ, ಮಣಿ ಎಜೆ ಕಾರ್ತಿಕೇಯನ್ ನಿರ್ದೇಶನದಲ್ಲಿ ತಯಾರಾದ “ಗೌಜಿ ಗಮ್ಮತ್” ತುಳು ಸಿನಿಮಾ ತುಳು ಚಿತ್ರ ಅಭಿಮಾನಿಗಳ ಅಪೇಕ್ಷೆಯ ಮೇರೆಗೆ ಮತ್ತೆ ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಮಾರ್ಚ್ 15 ರಿಂದ ಪ್ರದರ್ಶನಗೊಳ್ಳಲಿದೆ.

ಗೌಜಿ ಗಮ್ಮತ್ ಸಿನಿಮಾದ ತಾರಾಬಳಗದಲ್ಲಿ ಖ್ಯಾತ ನಾಮ ಕಲಾವಿದರನ್ನು ಒಳಗೊಂಡಿದ್ದು ಮುಖ್ಯವಾಗಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ,ಕುಸಲ್ದರಸೆ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ನಾಯಕ ನಟನಾಗಿ ಕರ್ಣ ಉದ್ಯಾವರ್ ನಾಯಕಿಯಾಗಿ ಸ್ವಾತಿ ಪ್ರಕಾಶ್ ಶೆಟ್ಟಿ ಅಭಿನಯಿಸಿದ್ದಾರೆ.
ಇನ್ನುಳಿದಂತೆ ಪ್ರಸನ್ನ ಶೆಟ್ಟಿ ಬೈಲೂರ್, ಉಮೇಶ್ ಮಿಜಾರ್, ಜಯಶೀಲಾ ಮರೋಳಿ, ಪ್ರಭಾಕರ್ ಬ್ರಹ್ಮಾವರ, ಚಂದ್ರಹಾಸ ಶೆಟ್ಟಿ ಮಾಣಿ , ಸುಜಾತ ಶಕ್ತಿನಗರ, ಕಿಶೋರ್ ಶೆಟ್ಟಿ ಪಿಲಾರ್, ಹರೀಶ್ ಪೂಜಾರಿ ಕಡ್ತಲ, ಹರೀಶ್ಚಂದ್ರ ಪೆರಾಡಿ ಪ್ರಭಾಕರ್ ಆಚಾರ್‍ಯ ಮೂಡುಬೆಳ್ಳೆ, ಅಶ್ವತ್ ಶೆಟ್ಟಿ, ವಿಕ್ಕಿ ರಾವ್, ಮಿರ್ಚಿ ಸಂದೇಶ್ ದೇವಾಡಿಗ ಅಶ್ವತ್ಥಪುರ, ಶಿವರಾಮ್ ವಿಟ್ಲ,ರಾಧಿಕಾ ಭಟ್, ವನಿತಾ ಸುವರ್ಣ,ನರಸಿಂಹ ನಾಯಕ್, ರಶ್ಮಿತಾ ಸಾಲಿಯಾನ್ ಪಿಲಾರ್, ಸುರಕ್ಷಾ ಕೋಟ್ಯಾನ್ ಪಿಲಾರ್ , ಲೊಕೇಶ್ ಮಾಣಿಲ, ಅನುಷಾ ಶೆಟ್ಟಿ , ಬೇಬಿ ಚಿತ್ರಿತಾ ದೇವಾಡಿಗ ಹಳೆಯಂಗಡಿ , ಲೊಕೇಶ್ ಶೆಟ್ಟಿ , ಜ್ಞಾನೇಶ್ ಆಚಾರ್ಯ, ಶಶಿರಾಜ್ ಆಚಾರ್ಯ, ಮಧು ಪೂಜಾರಿ ವಿಷ್ಣುನಗರ, ನಿಲೇಶ್ ಶೆಟ್ಟಿ ಮೊದಲಾದವರಿದ್ದಾರೆ.

LEAVE A REPLY

Please enter your comment!
Please enter your name here