ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಈಗಾಗಲೇ ಬಿಡುಗಡೆಗೊಳಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಈ ಬಾರಿ ಹೊಸ ಮುಖವನ್ನು ಪರಿಚಯಿಸುವ ಮೂಲಕ ಅಚ್ಚರಿ ಮೂಡಿಸಿದೆ.



ನಿವೃತ್ತ ಸೇನಾನಿ , ಸಂಘ ಪರಿವಾರದ ಹಿನ್ನಲೆಯುಳ್ಳ, ಐಐಎಂ ನಲ್ಲಿ ಉನ್ನತ ಶಿಕ್ಷಣ ಪಡೆದಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರ ಪಾಲಿಗೆ ಈ ಬಾರಿ ಟಿಕೆಟ್ ದೊರಕಿದ್ದು ಅಧಿಕೃತ ಘೋಷಣೆಯಾಗುತ್ತಿದಂತೆಯೇ ಮೊದಲು ಕದ್ರಿಯಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ದೇಶಕ್ಕಾಗಿ ಪರಮೋಚ್ಚ ಬಲಿದಾನ ನೀಡಿದ ವೀರ ಯೋಧರಿಗೆ ನಮನ ಸಲ್ಲಿಸಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ನಂತರ ಸಂಘ ನಿಕೇತನಕ್ಕೆ ತೆರಳಿ ಡಾಕ್ಟರ್ ಜೀ ಅವರ ಭಾವಚಿತ್ರಕ್ಕೆ ನಮಿಸಿ ಆಶೀರ್ವಾದ ಪಡೆದು,ಹಾಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರನ್ನು ಭೇಟಿ ಮಾಡಿದರು. ಬ್ರಿಜೇಶ್ ಚೌಟರನ್ನು ಸಂಸದರು ಅಭಿನಂದಿಸಿ ಸಿಹಿ ತಿನಿಸುವ ಮೂಲಕ ಶುಭ ಹಾರೈಸಿದರು.

