ಪುತ್ತೂರು : ಇನ್ಮುಂದೆ ಯಾವುದೇ ಸಂಘಟನೆ, ಪರಿವಾರದೊಂದಿಗೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ರಾಜಕೀಯದಿಂದ ದೂರ ಸರಿಯುವ ಮುನ್ಸೂಚನೆಯನ್ನು ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ರಾಜಾರಾಮ್ ಭಟ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ ಲೈವ್ ಮೂಲಕ ಮಾತನಾಡಿದ ರಾಜಾರಾಮ್ ಭಟ್, ಇನ್ಮುಂದೆ ಯಾವುದೇ ಸಂಘಟನೆ, ಪರಿವಾರದೊಂದಿಗೆ ಕಾರ್ಯ ನಿರ್ವಹಿಸುವುದಿಲ್ಲ ಹಾಗೆಯೇ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಇನ್ನು ನಾನೊಬ್ಬ ಸ್ವತಂತ್ರ ಮತದಾರ, ಯಾವ ಪಕ್ಷದ ವಕ್ತಾರನು ಅಲ್ಲ.., ಪರಿವಾರದ ವಕ್ತಾರನು ಅಲ್ಲ., ಹಾಗೆಯೇ ಯಾವುದೇ ಸಂಘಟನೆಗಳಲ್ಲಿಯೂ ಇನ್ಮುಂದೆ ನಾನು ಸದಸ್ಯನಾಗಿರುವುದಿಲ್ಲ ಎಂದಿದ್ದಾರೆ. ನನ್ನ ವೈಯಕ್ತಿಕ ಕಾರಣಗಳಿಂದ ಈ ಮೂಲಕ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ತಿಳಿದ್ದಾರೆ.