ಯಾವುದೇ ಮಹಿಳೆಗೆ, ತಾಯಿಯಾಗುವುದು ಅವಳ ಜೀವನದ ಅತ್ಯಂತ ವಿಶೇಷ ಅನುಭವವಾಗಿದೆ. ಇದೀಗ ಚೀನಾದ ಕಂಪನಿಯೊಂದು ಮಗುವಿಗೆ ಜನ್ಮ ನೀಡುವ ಮಹಿಳೆಗೆ ಬಿಗ್ ಆಫರ್ ನೀಡಿದೆ.
ಹೌದು, ಆಶ್ಚರ್ಯವಾದರೂ ಸತ್ಯ, ಚೀನಾದಲ್ಲಿರುವ ಕಂಪನಿಯು ಬಹಳ ವಿಚಿತ್ರವಾದ ಕೊಡುಗೆಗಳನ್ನು ನೀಡುತ್ತಿದೆ.
28 ರಿಂದ 29 ವರ್ಷ ವಯಸ್ಸಿನ ಯಾವುದೇ ಮಹಿಳೆ ಮಗುವಿಗೆ ಜನ್ಮ ನೀಡುವ ಮೂಲಕ ಹಣವನ್ನು ಗಳಿಸಬಹುದು ಎಂದು ಕಂಪನಿ ಹೇಳಿದೆ. ಇದು ಒಂದು ರೀತಿಯ ವಾಣಿಜ್ಯ ಜಾಹೀರಾತಾಗಿದ್ದು, ಮಕ್ಕಳನ್ನು ಹೊಂದುವ ಮೂಲಕ ಹಣವನ್ನು ಸಂಪಾದಿಸಲು ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದೆ.
ಮಕ್ಕಳನ್ನು ಪಡೆಯಿರಿ, ದುಡ್ಡು ಸಂಪಾದಿಸಿ.”
ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಹುಚೆನ್ ಹೌಸ್ ಕೀಪಿಂಗ್, ಮಹಿಳೆಯರು ಬಾಡಿಗೆ ತಾಯಂದಿರಾಗುವ ಮೂಲಕ ಹಣವನ್ನು ಗಳಿಸಬಹುದು ಎಂದು ಆಫರ್ ನೀಡುತ್ತಿದೆ. ಅಷ್ಟೇ ಅಲ್ಲ, ಅವರ ವಯಸ್ಸಿಗೆ ಅನುಗುಣವಾಗಿ ಪ್ಯಾಕೇಜ್ ನೀಡಲಾಗುತ್ತಿದೆ. 28 ವರ್ಷದ ಮಹಿಳೆ ತಾಯಿಯಾದರೆ ಆಕೆಗೆ 220,000 ಯುವಾನ್ ಅಂದರೆ 25,23,783 ರೂಪಾಯಿ ಮತ್ತು 29 ವರ್ಷದ ಮಹಿಳೆ ಮಗುವಿಗೆ ಜನ್ಮ ನೀಡಿದರೆ ಆಕೆಗೆ 210,000 ಯುವಾನ್ ಅಂದರೆ 24,19,057 ರೂಪಾಯಿ ನೀಡಲಾಗುತ್ತದೆ. ಅಂತೆಯೇ, ಮಹಿಳೆಗೆ ವಯಸ್ಸಾದಂತೆ, ಮಗುವಿಗೆ ಜನ್ಮ ನೀಡಲು ಅವಳು ಕಡಿಮೆ ಹಣವನ್ನು ಪಡೆಯುತ್ತಾಳೆ. ಯಾರಾದರೂ 40-42 ವರ್ಷಗಳಲ್ಲಿ ಈ ಕೆಲಸವನ್ನು ಮಾಡಲು ಬಯಸಿದರೆ, ಕಂಪನಿಯು ಅವರಿಗೆ 20 ಲಕ್ಷ ರೂಪಾಯಿಗಳನ್ನು ನೀಡುತ್ತಿದೆ.