Home ಕರಾವಳಿ ಮಂಗಳೂರು: ವೃದ್ದ ಮಾವನ ಮೇಲೆ ಸೊಸೆಯಿಂದ ಹಲ್ಲೆ- ಸೊಸೆ ಅರೆಸ್ಟ್

ಮಂಗಳೂರು: ವೃದ್ದ ಮಾವನ ಮೇಲೆ ಸೊಸೆಯಿಂದ ಹಲ್ಲೆ- ಸೊಸೆ ಅರೆಸ್ಟ್

0

ಮಂಗಳೂರು: ಸೊಸೆಯೊಬ್ಬಳು ತನ್ನ ವೃದ್ದ ಮಾವನಿಗೆ ಮನಸೊ ಇಚ್ಚೆ ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಇದೀಗ ಆರೋಪಿ ಸೊಸೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಲ್ಲೆ ಮಾಡಿದ ಸೊಸೆ ಉಮಾಶಂಕರಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಕುಲಶೇಖರ ನಿವಾಸಿ ಪದ್ಮನಾಭ ಸುವರ್ಣ(86) ಎಂದು ಗುರುತಿಸಲಾಗಿದೆ.

 

ಪದ್ಮನಾಭ ಅವರ ಮಗ ಪ್ರೀತಂ ಸುವರ್ಣ ವಿದೇಶದಲ್ಲಿ ಕೆಲಸದಲ್ಲಿದ್ದು, ಮನೆಯ ಸಿಸಿಟಿವಿಯನ್ನು ತನ್ನ ಮೊಬೈಲಿಗೆ ಕನೆಕ್ಟ್ ಮಾಡಿಕೊಂಡಿದ್ದರು. ಎರಡು ದಿನಗಳ ಹಿಂದೆ ತನ್ನ ವೃದ್ಧ ತಂದೆಗೆ ಪತ್ನಿ ಉಮಾಶಂಕರಿ ವಾಕಿಂಗ್ ಸ್ಟಿಕ್ ನಲ್ಲಿ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಮಗನ ಗಮನಕ್ಕೆ ಬಂದಿತ್ತು. ಅದರಂತೆ, ಪ್ರೀತಂ ಸುವರ್ಣ ತನ್ನ ತಂಗಿ ಮೂಡುಬಿದ್ರೆಯಲ್ಲಿ ಗಂಡನ ಮನೆಯಲ್ಲಿ ನೆಲೆಸಿರುವ ಪ್ರಿಯಾಗೆ ವಿಷಯ ತಿಳಿಸಿದ್ದರು. ಮಗಳು ಪ್ರಿಯಾ ಸುವರ್ಣ ಕಂಕನಾಡಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಆರೋಪಿ ಉಮಾಶಂಕರಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕರಾವಳಿಯ ಬುದ್ದಿವಂತರ ಜಿಲ್ಲೆಯಲ್ಲೇ ಈ ರೀತಿ ಅಮಾನವೀಯ ಕೃತ್ಯ ನಡೆದಿದ್ದು, ಜನಸಾಮಾನ್ಯರು ತಲೆ ತಗ್ಗಿಸುವಂತಾಗಿದೆ. ಬಂಧಿತ ಉಮಾಶಂಕರಿ ಅವರು ಸರಕಾರಿ ಅಧಿಕಾರಿ ಎಂದು ತಿಳಿದು ಬಂದಿದ್ದು, ಘಟನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

LEAVE A REPLY

Please enter your comment!
Please enter your name here