ಮಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಪರ್ಯಾಸವೆಂದರೆ FSL ವರದಿಯಲ್ಲಿ ಸ್ಪಷ್ಟವಾಗಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂದು ಹೇಳಲಾದ್ರೂ ಕಾಂಗ್ರೆಸ್ ಸರಕಾರ ಮುಖಭಂಗ ತಪ್ಪಿಸಲು ಇದನ್ನು ಅಡಗಿಸಲು ಪ್ರಯತ್ನಿಸುತ್ತಿದೆ.
ಒಂದು ವೇಳೆ ಆರೋಪಿಗಳು ನಾಸಿರ್ ಸಾಬ್ ಜಿಂದಾಬಾದ್ ಎನ್ನುತ್ತಿದ್ದರೆ ಅವರನ್ನು ಬಂಧಿಸುವ ಅಗತ್ಯ ಏನಿತ್ತು ಸಿದ್ದರಾಮಯ್ಯನವರೇ..? ದೇಶದ್ರೋಹಿಗಳನ್ನು ಸಮರ್ಥಿಸುವ ಬರದಲ್ಲಿ ದೇಶಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದೀರಿ.
ಸಿಎಂ ಸಿದ್ದರಾಮಯ್ಯನವರು ಈ ರಾಜ್ಯವನ್ನು ಆಳುವ ಎಲ್ಲಾ ನೈತಿಕತೆಯನ್ನು ಕಳೆದುಕೊಂಡಿದ್ದಾರೆ.ಅವರು ಕರ್ನಾಟಕದ ಜನತೆಯ ಬಳಿ ಕ್ಷಮೆಯಾಚಿಸಿ ನೈತಿಕ ಹೊಣೆ ಹೊತ್ತು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಗುಡುಗಿದ್ದಾರೆ.