Home ಕರಾವಳಿ ಮಂಗಳೂರು: ಮುಚ್ಚುವ ಸ್ಥಿತಿಯತ್ತ 154 ವರ್ಷ ಇತಿಹಾಸವಿರುವ ಗಣಪತಿ ಶಾಲೆ

ಮಂಗಳೂರು: ಮುಚ್ಚುವ ಸ್ಥಿತಿಯತ್ತ 154 ವರ್ಷ ಇತಿಹಾಸವಿರುವ ಗಣಪತಿ ಶಾಲೆ

0

ಮಂಗಳೂರು : ಮಂಗಳೂರಿನ ಹಂಪನಕಟ್ಟೆಯ ಜಿ.ಹೆಚ್.ಎಸ್ ರೋಡ್ ನಲ್ಲಿರುವ ಗಣಪತಿ ಹೈಸ್ಕೂಲ್ 1870 ಪ್ರಾರಂಭವಾಗಿ, ಈ ಶಾಲೆಯು ಉಮಾಮಹೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯುತಿತ್ತು. 1915 ರಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದರು. 154 ವರ್ಷದ ಇತಿಹಾಸವಿದ್ದ ಶಾಲೆಯಲ್ಲಿ ಸ್ವತಂತ್ರ ಹೋರಾಟಗಾರರಾದ ಕಾರ್ನಾಡ್ ಸದಾಶಿವ ರಾವ್, ಸಂವಿಧಾನ ಕರಡು ಸಮಿತಿಯ ಸದಸ್ಯರಾದ ಬೆನೆಗಲ್ ನರಸಿಂಗ ರಾವ್, ತುಳು ರಂಗಭೂಮಿಯಲ್ಲಿ ಸಾಧನೆ ಮಡಿದ ಸೀತಾರಾಮ್ ಕುಲಾಲ್, ವಿಜಯಕುಮಾರ್ ಕೊಡಿಯಾಲ್ ಬೈಲ್, ದೇವದಾಸ್ ಕಾಪಿಕಾಡ್ ಹಾಗೂ ಇನ್ನಿತರರು ಇಲ್ಲೇ ಶಿಕ್ಷಣ ಪಡೆದಿದ್ದರು.


ಶಾಲೆಯಲ್ಲಿ 322 ವಿದ್ಯಾರ್ಥಿಗಳಿದ್ದರೂ ಒಂದೂವರೆ ವರ್ಷದ ಹಿಂದೆಯಿಂದ ಯಾವುದೇ ಮುನ್ಸೂಚನೆಯನ್ನು ನೀಡದೆ, ವಿದ್ಯಾರ್ಥಿಗಳ ಪಾಲಕರೊಂದಿಗೆ ಹಾಗೂ ಶಿಕ್ಷಕರೊಂದಿಗೆ ಮಾತನಾಡದೆ, ಶಾಲೆಯ ಆಡಳಿತ ಮಂಡಳಿಯು ಮಕ್ಕಳ ಸಂಖ್ಯೆ ಕಡಿಮೆಯೆಂದು ಪ್ರಚಾರ ಮಾಡಿ, ಮಾಹಿತಿಯನ್ನು ನೀಡುತ್ತಿದೆ.
ಮುಂದಿನ ವರ್ಷದ ಎಸ್.ಎಸ್.ಎಲ್.ಸಿ ಮಕ್ಕಳ ಹಾಗೂ ಇನ್ನಿತರ ವಿದ್ಯಾರ್ಥಿಗಳ ಭವಿಷ್ಯ ಇವರಿಂದ ಅತಂತ್ರವಾಗಿದೆ. ಮಾಹಿತಿಯ ಪ್ರಕಾರ, ಸದ್ರಿ ಶಾಲಾಡಳಿತ ಮಂಡಳಿಯವರು ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸುಮಾರು 400 ಕೋಟಿ ಮೊತ್ತಕ್ಕೆ ಸದ್ರಿ ಶಾಲೆಯ ಜಾಗವನ್ನು ಮಾರಾಟ ಮಾಡುವ ದೂರ ದ್ರಷ್ಠಿ ಹೊಂದಿರುವ ಸತ್ಯಸಂಗತಿಯು ಬೆಳಕಿಗೆ ಬಂದಿದೆಯಾಗಿದೆ.

LEAVE A REPLY

Please enter your comment!
Please enter your name here