Home ತಾಜಾ ಸುದ್ದಿ BREAKING: ಅಭಿಮಾನಿ ಕಾಲಿನ ಮೇಲೆ ಹರಿದ ನಟ ಯಶ್ ಬೆಂಗಾವಲು ವಾಹನ

BREAKING: ಅಭಿಮಾನಿ ಕಾಲಿನ ಮೇಲೆ ಹರಿದ ನಟ ಯಶ್ ಬೆಂಗಾವಲು ವಾಹನ

0

ಅಭಿಮಾನಿಯ ಕಾಲಿನ ಮೇಲೆ ನಟ ಯಶ್ ಅವರ ಬೆಂಗಾವಲು ವಾಹನ ಹರಿದ ಘಟನೆ ಬಳ್ಳಾರಿಯ ಹೊರವಲಯದ ಬಾಲಾಜಿ ಕ್ಯಾಂಪ್ ನಲ್ಲಿ ನಡೆದಿದೆ.

ಅಮೃತೇಶ್ವರ ಸ್ಫಟಿಕ ಲಿಂಗ ದೇವಸ್ಥಾನದ ಉದ್ಘಾಟನೆಗೆ ರಾಕಿಂಗ್ ಸ್ಟಾರ್ ಯಶ್ ಆಗಮಿಸಿದ್ದರು. ಈ ವೇಳೆ ಯಶ್ ಅವರನ್ನು ನೋಡಲು ಅಭಿಮಾನಿಗಳು ಆಗಮಿಸಿದ್ದರು.

ಯಶ್ ತೆರಳುವ ವೇಳೆ ಅವರ ಕಾರನ್ನು ಅಭಿಮಾನಿಗಳು ಹಿಂಬಾಲಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರ ಕಾಲಿನ ಮೇಲೆ ಯಶ್ ಬೆಂಗಾವಲು ವಾಹನ ಹರಿದಿದೆ.

ಘಟನೆಯಲ್ಲಿ ಸಿರಗುಪ್ಪದ ವಸಂತ್ ಎಂಬ ಯುವಕ ಗಾಯಗೊಂಡಿದ್ದಾನೆ. ಅಭಿಮಾನಿ ವಸಂತ್ ಪಾದದ ಮೇಲೆ ವಾಹನ ಹರಿದಿದೆ. ಗಾಯಾಳು ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here