ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅರುಣ್ ಪುತ್ತಿಲ ಸ್ಪರ್ಧಿಸಲಿದ್ದಾರೆಂದು ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತಾ ಘೋಷಿಸಿದ್ದಾರೆ.ಪುತ್ತೂರಿನ ಪುತ್ತಿಲ ಪರಿವಾರದ ಕಛೇರಿಯಲ್ಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಮುಂದುವರಿದು ಅವರು ಸಂಘಟನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸುವ ಕಾರ್ಯ ನಡೆಯಲಿದೆ. ಜಿಲ್ಲೆಯಲ್ಲಿ ನಡೆಯಲಿರುವಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪುತ್ತಿಲ ಪರಿವಾರ ಸ್ಪರ್ಧಿಸಲಿದೆ ಎಂದು ಅವರು ತಿಳಿಸಿದರು.
ಸೇವಾಕಾರ್ಯದ ಜತೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಕಾರ್ಯವನ್ನು ಪುತ್ತಿಲ ಪರಿವಾರ ಮಾಡುವ ಮೂಲಕ ಕಾರ್ಯಕರ್ತರ ಹಾಗೂ ಮತದಾರರ ಕೈ ಬಲಪಡಿಸುವ ಕಾರ್ಯ ಮಾಡಲಿದೆ ಎಂದರು ಮಾರ್ಚ್ 3ರಂದು ಪುತ್ತಿಲ ಪರಿವಾರದದಿಮದ ಅಂಬ್ಯುಲೆನ್ಸ್ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿಉಮೇಶ್ ಕೋಡಿಬೈಲ್, ವಕ್ತಾರ ಕೃಷ್ಣ ಉಪಾದ್ಯಯ, ಪ್ರಮುಖರಾದ ಅನಿಲಗ ತೆಂಕಿಲ, ಮಹೇಂದ್ರ ವರ್ಮಾ
ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಪುತ್ತಿಲರವರು 2023ರಲ್ಲಿ ಪಕ್ಷದಿಂದ ಟಿಕೆಟ್ ಸಿಗದಿದ್ದಾಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 62 ಸಾವಿರಕ್ಕೂ ಮಿಕ್ಕಿ ಮತಗಳನ್ನು ಪಡೆದು ವಿರೋಚಿತ ಸೋಲು ಅನುಭವಿಸಿದ್ದರು. ಇದಾದ ಬಳಿಕ ಅವರು ಪುತ್ತಿಲ ಪರಿವಾರ ಎಂಬ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಯನ್ನು ಕಟ್ಟಿದ್ದರು. ಇನ್ನೊಂದೆಡೆ ಬಿಜೆಪಿ ಸೇರ್ಪಡೆಗೆ ತೆರೆ ಮರೆಯಲ್ಲಿ ಪ್ರಯತ್ನ ನಡೆಸಿದ್ದರು.
ವಿಧಾನಸಭೆ ಚುನಾವಣೆ ಸಂದರ್ಭ ಪುತ್ತಿಲರ ಜತೆ ಪ್ರಭಲವಾಗಿ ಗುರುತಿಸಕೊಂಡಿದ್ದ ಸುರೇಶ್ ಪುತ್ತೂರಾಯರವರು ಸಂಧಾನ ಮಾತುಕತೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಈ ಮಧ್ಯೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ತನ್ನ ಅಭ್ಯರ್ಥಿಗಳನ್ನು ಇಳಿಸಿ ಬಿಜೆಪಿಗೆ ಸಡ್ಡು ಹೊಡೆದಿತ್ತು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆವಿ ಜತೆ ಬಿಜೆಪಿ ಸೇರ್ಪಡೆ ಕುರಿತು ಅರುಣ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದ ಪ್ರಮುಖರು ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಬದಲಾದ ಬಳಿಕ ನೂತನ ಅಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜತೆಯೂ ಪುತ್ತಿಲರವರು ಗೌಪ್ಯ ಮಾತುಕತೆ ನಡೆಸಿದ್ದರು.
ಈ ಎಲ್ಲ ಬೆಳವಣಿಗೆಗಳಿಂದ ಒಂದು ಹಂತದಲ್ಲಿ ಅರುಣ್ ಪುತ್ತಿಲ ಹಾಗೂ ಪುತ್ತಿಲ ಪರಿವಾರ ಬಿಜೆಪಿ ಸೇರ್ಪಡೆ ಬಹುತೇಕ ಖಚಿತ ಎಂಬ ಮಾತುಗಳು ಎರಡು ಪಾಳಯದಿಂದಲೂ ಕೇಳಿ ಬರುತಿತ್ತು . ಆದರೇ ಪುತ್ತಿಲರಿಗೆ ಪಕ್ಷದಲ್ಲಿ ಆಯಕಟ್ಟಿನ ಹುದ್ದೆ ನೀಡುವುದಕ್ಕೆ ಪುತ್ತೂರು ಬಿಜೆಪಿಯ ಕೆಲ ನಾಯಕರು ಹಾಗೂ ಪುತ್ತೂರಿನ ಸಂಘ ಪರಿವಾರದ ಮುಖಂಡರು ಪ್ರಭಲ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪಕ್ಷಸೇರ್ಪಡೆ ವಿಚಾರ ನೆನೆಗುದಿಗೆ ಬಿದ್ದಿತ್ತು. ಈ ಹಿನ್ನಲೆ ಸಂಘಟನಾ ರಾಜೇಶ್ ಕೆವಿಯವರು ಪುತ್ತೂರಿಗೆ ಆಗಮಿಸಿ ಕಾರ್ಯಕರ್ತರ ಹಾಗೂ ಮುಖಂಡರ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ಮಾಡಿದ್ದರು. ಈ ಸಭೆಯಲ್ಲೂ ಹುದ್ದೆ ಕೊಡುವ ಬಗ್ಗೆ ಸಹಮತ ಮೂಡಿರಲಿಲ್ಲ.
3 ದಿನದ ಗಡುವು
ಈ ಎಲ್ಲ ಬೆಳವಣಿಗೆಗಳ ಬಳಿಕ ಇದೆ ತಿಂಗಳ ಫೆ 5 ರಂದು ಸಮಾಲೋಚನಾ ಸಭೆ ನಡೆಸಿದ ಪುತ್ತಿಲ ಪರಿವಾರ ಪುತ್ತೂರು ವಿದಾನಸಭಾ ಕ್ಷೇತ್ರದ ಅಧ್ಯಕ್ಷ ಹುದ್ದೆಯ ಬೇಡಿಕೆ ಇರಿಸಿ 3 ದಿನಗಳ ಗಡುವು ನೀಡಿತ್ತು. ಈ ಗಡುವು ಪೂರ್ಣಗೊಳ್ಳುವ ಮೊದಲು ಪುತ್ತಿಲರನ್ನು ಸಂಪರ್ಕಿಸಿದ ವಿಜಯೇಂದ್ರರವರು ಮಾತುಕತೆಯ ಆಫರ್ ನೀಡದ್ದರು ಎಂದು ಪುತ್ತಿಲ ಪರಿವಾರದ ಮೂಲಗಳು ತಿಳಿಸಿದ್ದವು. ಈ ಬಳಿಕ ಪುತ್ತಿಲ ಹಾಗೂ ವಿಜಯೇಂದ್ರ ಮಧ್ಯೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು. ಏತನ್ಮದ್ಯೆ ಮೈಸೂರಿನಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಬಿ ವೈ ವಿಜಯೇಂದ್ರರವರು ಪ್ರಧಾನಿ ನರೇಂದ್ರ ಮೋದಿಯ ಗೆಲುವಿಗಾಗಿ ಪುತ್ತಿಲರವರು ಬೇಷರತ್ತಾಗಿ ಬಿಜೆಪಿಗೆ ಬರಬೇಕು ಎಂದು ಸೂಚಿಸಿದ್ದರು