ಬೆಳ್ತಂಗಡಿ : ಚಾರಣಕ್ಕೆಂದು ಚಾರ್ಮಾಡಿಗೆ ತೆರಳಿದ ಯುವಕನೊಬ್ಬ ಕಾಡಿನ ಮಧ್ಯೆ ನಾಪತ್ತೆಯಾಗಿದ್ದ ವಿಚಾರ ಆತಂಕಕ್ಕೀಡು ಮಾಡಿತ್ತು. ಇದೀಗ ಆತ ಪತ್ತೆಯಾಗುವುದರೊಂದಿಗೆ ಪ್ರಸಂಗ ಸುಖಾಂತ್ಯಗೊಂಡಿದೆ. ಮೂಡಿಗೆರೆಯ ಬಲ್ಲಾಳರಾಯನ ದುರ್ಗದಿಂದ ಹತ್ತು ಮಂದಿ ಯುವಕರ ತಂಡ ಬೆಳ್ತಂಗಡಿಯ ಚಾರ್ಮಾಡಿಯ ಭಂಡಾಜೆ ಫಾಲ್ಸ್ ಗೆ ಫೆ.25ರಂದು ಚಾರಣಕ್ಕೆ ತೆರಳಿದ್ದರು. ಕೆಎಂಸಿ ಆಸ್ಪತ್ರೆಯ ಎಂಬಿಬಿಎಸ್ ವಿದ್ಯಾರ್ಥಿಗಳ ಈ ತಂಡದಲ್ಲಿದ್ದ ಧನುಷ್ ಎಂಬಾತ ಕಿ.ಮೀ. ಕಾಡಿನ ಮಧ್ಯೆ ಮೊಬೈಲ್ ಸ್ವಿಚ್ ಆಫ್ ಆಗಿ ನಾಪತ್ತೆಯಾಗಿದ್ದಾನೆ. ತಂಡದಲ್ಲಿದ್ದ ಆದಿತ್ಯ ಎಂಬ ಯುವಕ 112 ಪೊಲೀಸ್ ವಾಹನಕ್ಕೆ ಕರೆ ಮಾಡಿದ್ದಾರೆ. ಅದರಂತೆ ಪೊಲೀಸರು ಹೋಗಿ ತಂಡದಲ್ಲಿದ್ದ ಯುವಕರನ್ನು ವಿಚಾರಿಸಿದ್ದಾರೆ. ಅದರಂತೆ ಆತ ತಪ್ಪಿಕೊಂಡಿರುವ ನಿರ್ದಿಷ್ಟ ಸ್ಥಳವನ್ನು ಸೂಚಿಸಿದ್ದಾರೆ. ಅದರಂತೆ ಪೊಲೀಸರು ರಾತ್ರಿವೇಳೆ ಕಾಡಿನ ಮಧ್ಯೆ 3.30 ಗಂಟೆಗಳ ಕಾಲ ಹುಡುಕಾಟ ನಡಿಸಿದ್ದಾರೆ. ಕೊನೆಗೆ ಗುಡ್ಡದ ಪ್ರದೇಶದಲ್ಲಿ ಮಧ್ಯರಾತ್ರಿ ಸುಮಾರು 700 ಅಡಿ ಕೆಳಗೆ ದಟ್ಟವಾದ ಅರಣ್ಯ ಮಧ್ಯದಲ್ಲಿ ಓರ್ವನೇ ಇದ್ದಿರುವುದು ಕಂಡು ಬಂದಿದೆ. ಆತ ಸುರಕ್ಷಿತವಾಗಿದ್ದು, ಆತನ ತಂಡದೊಂದಿಗೆ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.