ರಾಮನಗರ: ಲೋಕಸಭಾ ಚುನಾವಣೆಗೂ ಮುನ್ನವೇ ರಾಮನಗರದಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿದೆ. ಹೌದು, ರಾಮನಗರದಲ್ಲಿ ಗಿಫ್ಟ್ ಬಾಕ್ಸ್ ಗಳ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿಕೆ ಸುರೇಶ್ ಹಾಗೂ ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಭಾವಚಿತ್ರಗಳನ್ನ ಹಾಕಿ ಕುಕ್ಕರ್, ತವಾ, ಡಿನ್ನರ್ ಸೆಟ್ ಗಳ ಗಿಫ್ಟ್ ಬಾಕ್ಸ್ ಹಂಚಿಕೆ ಮಾಡಲಾಗ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಗಿಫ್ಟ್ ಬಾಕ್ಸ್ ನೀಡಿ ಕಾಂಗ್ರೆಸ್ ಗೆ ವೋಟ್ ಹಾಕುವಂತೆ ಹೇಳಳಾಗುತ್ತಿದೆ ಅಂಥ ಸ್ತಳೀಯ ಬಿಜೆಪಿ-ಜೆಡಿಎಸ್ (BJP- JDS) ಆರೋಪ ಮಾಡುತ್ತಿದ್ದಾರೆ. ಇದಲ್ಲದೇ ಕಾಂಗ್ರೆಸ್ ನಾಯಕರ ಗಿಫ್ಟ್ ಪಾಲಿಟಿಕ್ಸ್ ಗೆ ಮುಖಂಡರು ಕಿಡಿಕಾರಿದ್ದಾರೆ.