Home ತಾಜಾ ಸುದ್ದಿ ಎಲ್ಲಾ ಗ್ರಾಮ ಪಂಚಾಯ್ತಿಯಲ್ಲೂ ಬಜೆಟ್ ಮಂಡನೆ : ಪ್ರಿಯಾಂಕ್ ಖರ್ಗೆ

ಎಲ್ಲಾ ಗ್ರಾಮ ಪಂಚಾಯ್ತಿಯಲ್ಲೂ ಬಜೆಟ್ ಮಂಡನೆ : ಪ್ರಿಯಾಂಕ್ ಖರ್ಗೆ

0

ಕಲಬುರಗಿ: ಆರ್‌ಡಿಪಿಆರ್‌ ಇಲಾಖೆ ಖಾತೆ ಹೊಂದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಪತ್ರ ಬರೆದು ಬಜೆಟ್‌ ಸಿದ್ಧಪಡಿಸಿ ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಮಂಡಿಸಿ ಅನುಮೋದನೆ ಪಡೆಯುವಂತೆ ಸೂಚಿಸಿದ್ದಾರೆ.


ಫೆಬ್ರವರಿ 8ರಂದು ಜಿಪಿ ಅಧ್ಯಕ್ಷರುಗಳಿಗೆ ಪತ್ರ ಬರೆದಿರುವ ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಭಾಯಿಸುವಂತೆ ಸೂಚಿಸಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಕಾಯಿದೆ 1993ರ ಪ್ರಕಾರ, ಗ್ರಾ.ಪಂ.ಗಳು ಅವರು ಪಡೆಯುವ ಅನುದಾನ ಮತ್ತು ಗ್ರಾ.ಪಂ.ಗಳಲ್ಲಿ ಸಾರ್ವಜನಿಕರಿಂದ ವಿವಿಧ ತೆರಿಗೆಗಳನ್ನು ಸಂಗ್ರಹಿಸುವ ಆಧಾರದ ಮೇಲೆ ಪ್ರತಿ ವರ್ಷ ತಮ್ಮ ಬಜೆಟ್ ಅನ್ನು ಸಿದ್ಧಪಡಿಸಬೇಕು ಎಂದು ಖರ್ಗೆ ಹೇಳಿದ್ದಾರೆ. ಅಧ್ಯಕ್ಷರೂಗಳು ಜಿಪಿಗಳಲ್ಲಿ ತಮ್ಮಲ್ಲಿರುವ ಮೊತ್ತದ ವಿವರಗಳನ್ನು ಮತ್ತು ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ತೆಗೆದುಕೊಳ್ಳುವ ಪ್ರಸ್ತಾವನೆಯನ್ನು ಬಜೆಟ್‌ನಲ್ಲಿ ನಮೂದಿಸಬೇಕು. ಅದು ಕಡ್ಡಾಯವಾಗಿದೆ. ಮಾರ್ಚ್ 10ರ ಮೊದಲು ಬಜೆಟ್ ಸಿದ್ಧಪಡಿಸಿ ಅಂಗೀಕರಿಸಬೇಕು. ಬಜೆಟ್ ಮಂಡನೆಯನ್ನು ಸಂಬಂಧಿಸಿದ ತಾಲ್ಲೂಕು ಪಂಚಾಯಿತಿಗಳಿಗೆ ಕಳುಹಿಸಬೇಕು ಎಂದು ಖರ್ಗೆ ಹೇಳಿದರು.ಕಾಂಗ್ರೆಸ್ ಸರ್ಕಾರ ಪಾರದರ್ಶಕತೆ ತರಲು ಬಯಸುತ್ತಿರುವ ಕಾರಣ ಜಿ.ಪಂ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ ಎಂದು ಖರ್ಗೆ ಹೇಳಿದ್ದಾರೆ. ತಮ್ಮ ಜಿ.ಪಂಗಳು ಏನು ಮಾಡುತ್ತಿವೆ ಎಂದು ತಿಳಿದುಕೊಳ್ಳುವ ಹಕ್ಕು ಹಳ್ಳಿಗರಿಗೆ ಇದೆ. ಬಜೆಟ್ ಅಂಗೀಕಾರವಾದರೆ, ಅದನ್ನು ನೋಟಿಸ್ ಬೋರ್ಡ್‌ನಲ್ಲಿ ಅಂಟಿಸಬೇಕು. ಜನರು ತಮ್ಮ ಪಂಚಾಯತ್‌ಗಳ ಚಟುವಟಿಕೆಗಳು ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ಜಿ.ಪಂಗಳ ಆರ್ಥಿಕ ಸ್ಥಿತಿ ಮತ್ತು ಅಗತ್ಯತೆಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಎಲ್ಲೆಲ್ಲಿ ಹೆಚ್ಚಿನ ಅನುದಾನದ ಅಗತ್ಯವಿದ್ದರೂ ಸರಕಾರ ಖಂಡಿತ ಸ್ಪಂದಿಸಲಿದೆ ಎಂದರು.

LEAVE A REPLY

Please enter your comment!
Please enter your name here