ಮಂಗಳೂರು: ಸರ್ವಜ್ಞ ಜಯಂತಿ ಕಾರ್ಯಕ್ರಮ ನಗರದ ಬೋಂದೆಲ್ ವೃತ್ತ ದಲ್ಲಿ ನಡೆಯಿತು. ಸರ್ವಜ್ಞ ಪ್ರತಿಮೆ ಗೆ ಹೂವಿನ ಹಾರಾರ್ಪಣೆ ನಂತರ ಮಹಿಳಾ ಪೊಲೀಟೆಕ್ನಿಕ್ ಬೋಂದೆಲ್ ಸಭಾಗೃಹ ದಲ್ಲಿ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತಾಲೂಕಿನ ತಹಶೀಲ್ದಾರ್ ಚೌದ್ರಿ, ವಿದ್ಯಾ ಸಂಸ್ಥೆ ಯ ಪ್ರಿನ್ಸಿಪಾಲ್ ಗುಣವಂತ, ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಡಾಕ್ಟರ್ ಅಣ್ಣಯ್ಯ ಕುಲಾಲ್, ರಾಜ್ಯಧ್ಯಕ್ಷ ಗಂಗಾಧರ್ ಬಂಜನ್, ಜಿಲ್ಲಾಧ್ಯಕ್ಷರು ಸುಕುಮಾರ್ ಬಂಟ್ವಾಳ, ಲಯನ್ ಅನಿಲ್ ದಾಸ್, ಶೇಷಪ್ಪ ಮಾಸ್ಟರ್ , ಅಶೋಕ್ ಕೂಳೂರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಾದ ರಾಜೇಶ್ ಮತ್ತು ಜಿಲ್ಲೆ ಯ ಕುಲಾಲ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಿತು.
ಜಯಂತ್ ಸಂಕೋಳಿಗೆ ಮತ್ತು ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.
ಮಹಾಬಲ ಮಾಸ್ಟರ್ ನಿರ್ ಮಾರ್ಗ ಧನ್ಯವಾದ ಅರ್ಪಿಸಿ ವಂದಿಸಿದರು.