ನ್ಯೂಯಾರ್ಕ್: ಕೇರಳ ಮೂಲದ ಕುಟುಂಬವೊಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಮೃತರನ್ನು ಆನಂದ್ ಸುಜಿತ್ ಹೆನ್ರಿ (42), ಪತ್ನಿ ಅಲೈಸ್ ಪ್ರಿಯಾಂಕಾ(40), ಮತ್ತು ಅವರ 4 ವರ್ಷದ ಅವಳಿ ಮಕ್ಕಳಾದ ನೋಹ್ ಮತ್ತು ನೀಥಾನ್ ಎಂದು ಗುರುತಿಸಲಾಗಿದೆ. ಅಲೈಸ್ ಪ್ರಿಯಾಂಕಾ ದೇಹದಲ್ಲಿ ಗುಂಡಿನ ಗಾಯಗಳಿವೆ. ಆದರೆ ಮಕ್ಕಳಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಮನೆಯ ಬಾತ್ರೂಮ್ನಲ್ಲಿ 9 ಎಂಎಂ ಪಿಸ್ತೂಲ್ ಪತ್ತೆಯಾಗಿದ್ದು, ಪತ್ನಿಯನ್ನು ಕೊಲೆ ಮಾಡಿ, ತಾನು ಗುಂಡು ಹಾರಿಸಿಕೊಂಡು ಆನಂದ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆನಂದ್ ಹೆನ್ರಿ ಅವರು AI ಕಂಪನಿಯನ್ನು ಸಹ-ಸ್ಥಾಪಿಸುವ ಮೊದಲು 2022ರಿಂದ 2023 ರವರೆಗೆ ಮೆಟಾಗೆ ಸಾಫ್ಟ್‌ವೇರ್ ಎಂಜಿನಿಯರಿಂಗ್ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದರು. ಅವರು ಈ ಹಿಂದೆ ಸುಮಾರು ಎಂಟು ವರ್ಷಗಳ ಕಾಲ ಗೂಗಲ್‌ನಲ್ಲಿ ಕೆಲಸ ಮಾಡಿದ್ದರು.