Home ತಾಜಾ ಸುದ್ದಿ 2 ವರ್ಷದ ಕಂದಮ್ಮನ ಕೊಂದು ತಾನು ನೇಣಿಗೆ ಶರಣಾದ ತಾಯಿ..!

2 ವರ್ಷದ ಕಂದಮ್ಮನ ಕೊಂದು ತಾನು ನೇಣಿಗೆ ಶರಣಾದ ತಾಯಿ..!

0

ಕೌಟುಂಬಿಕ ಕಲಹಕ್ಕೆ ತನ್ನ 2 ವರ್ಷದ ಮಗಳನ್ನು ಕೊಂದು ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ.


ಮೃತರನ್ನು ಶಿವಲೀಲಾ (23) ವರ್ಷಿತಾ (2) ಎಂದು ಗುರುತಿಸಲಾಗಿದೆ. ಶಿವಲೀಲಾ ಚಿಂಚೋಳಿ ತಾಲ್ಲೂಕಿನ ಕೆರೋಳ್ಳಿ ಗ್ರಾಮದ ನಿವಾಸಿಯಾಗಿದ್ದು, ಮೂರು ವರ್ಷದ ಹಿಂದೆ ಮದುವೆಯಾಗಿದೆ. ಆದರೆ ನಿನ್ನೆ ಸಂಜೆ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಲೀಲಾ ಮದುವೆಯಾದ ಬಳಿಕ ಗಂಡ, ಅತ್ತೆ ವಿರುದ್ಧ ಕಿರುಕುಳ ಆರೋಪ ಮಾಡಿದ್ದರು. ಗಂಡ, ಅತ್ತೆಯ ಕಿರುಕುಳಕ್ಕೆ ತವರು ಮನೆಗೆ ಶಿವಲೀಲಾ ಬಂದಿದ್ದಳು. ಎರಡು ದಿನದ ಹಿಂದೆಯಷ್ಟೇ ಮತ್ತೆ ಶಿವಲೀಲಾ ಗಂಡನ ಮನೆ ಸೇರಿದ್ದಳು. ಆದರೆ ಅಲ್ಲಿ ಮಗುವಿನೊಂದಿಗೆ ನೇಣಿಗೆ ಶರಣಾಗಿದ್ದಾಳೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here