Home ಕರಾವಳಿ BREAKING: ‘ಹಿಂದೂ ಧರ್ಮ’ದ ಬಗ್ಗೆ ಅವಹೇಳನ ಹೇಳಿಕೆ: ‘ಶಾಲಾ ಶಿಕ್ಷಕಿ’ ಸಿಸ್ಟರ್ ಪ್ರಭಾ ಅಮಾನತು

BREAKING: ‘ಹಿಂದೂ ಧರ್ಮ’ದ ಬಗ್ಗೆ ಅವಹೇಳನ ಹೇಳಿಕೆ: ‘ಶಾಲಾ ಶಿಕ್ಷಕಿ’ ಸಿಸ್ಟರ್ ಪ್ರಭಾ ಅಮಾನತು

0

ಮಂಗಳೂರು: ಶಾಲೆಯೊಂದರ ಶಿಕ್ಷಕಿಯೊಬ್ಬರು ಹಿಂದೂ ಧರ್ಮ, ಶ್ರೀರಾಮ, ಅಯೋಧ್ಯೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ ಶಿಕ್ಷಕಿಯನ್ನು ಅಮಾನತುಗೊಳಿಸಿ ಶಾಲಾ ಆಡಳಿತ ಮಂಡಳಿ ಆದೇಶಿಸಿದೆ.

ಮಂಗಳೂರಿನ ಸಂತ ಜೆರೋಸಲಾ ಶಾಲೆಯಲ್ಲಿನ 7ನೇ ತರಗತಿ ಶಿಕ್ಷಕಿ ಸಿಸ್ಟರ್ ಪ್ರಭಾ ಎಂಬುವರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು.

 

ಶಿಕ್ಷಕಿಯ ಹೇಳಿಕೆ ಖಂಡಿಸಿ ಶಾಸಕ ವೇದವ್ಯಾಸ ಕಾಮತ್ ಜೊತೆಗೂಡಿ ಹಿಂದೂ ಕಾರ್ಯಕರ್ತರು ಶಾಲೆಯ ಬಳಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಮುತ್ತಿಗೆಗೂ ಯತ್ನಿಸಿದ್ದರು.

ಈ ಘಟನೆಯ ನಂತ್ರ ಸಂತ ಜೆರೋಸಲಾ ಶಾಲೆಯ ಆಡಳಿತ ಮಂಡಳಿಯು 7ನೇ ತರಗತಿ ಶಿಕ್ಷಕಿ ಪ್ರಭಾ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ. ಈ ಮೂಲಕ ತಾತ್ಕಾಲಿಕವಾಗಿ ಪ್ರಕರಣಕ್ಕೆ ಬ್ರೇಕ್ ನೀಡಲಾಗಿದೆ.

LEAVE A REPLY

Please enter your comment!
Please enter your name here