ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮಿ ಯೋಜನೆಯಾಗಿದೆ. ಈ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಯರಿಗೆ 2000 ಪ್ರತಿ ತಿಂಗಳು ಸಹಾಯಧನವನ್ನು ಸರ್ಕಾರ ನೀಡಲಾಗುತ್ತದೆ. ಆದ್ರೇ ಈವರೆಗೆ ಕೆಲವರಿಗೆ ಹಣ ಬಂದಿಲ್ಲ. ಹಾಗಾದ್ರೇ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರದೇ ಇಲ್ಲದಿರುವಂತ ಅನರ್ಹರ ಲೀಸ್ಟ್ ಇಲ್ಲಿದೆ.
ಚೆಕ್ ಮಾಡೋದು ಹೇಗೆ ಅಂತ ಮುಂದೆ ಓದಿ.
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರೋ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೀಡಲಾಗುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಕೆಯಾದ ನಂತ್ರ, ಅನೇಕರು ಅರ್ಹರಿದ್ದು, 2000 ಹಣ ಕೂಡ ಪಡೆಯುತ್ತಿದ್ದಾರೆ. ಆದ್ರೇ ಕೆಲವರಿಗೆ ಹಣ ಬಂದಿಲ್ಲ.
ಇನ್ನೂ ಯಾರು ಬಿಪಿಎಲ್ ಕಾರ್ಡ್ ಅರ್ಹರು, ಯಾರು ಅಲ್ಲ ಎನ್ನುವ ಬಗ್ಗೆಯೂ ಆಹಾರ ಇಲಾಖೆಯಿಂದ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಅನರ್ಹರ ವಿರುದ್ಧ ಕಾನೂನು ಕ್ರಮವನ್ನು ಕೂಡ ಕೈಗೊಳ್ಳಲಾಗುತ್ತಿದೆ. ಇದರ ನಡುವೆ ಗೃಹಲಕ್ಷ್ಮಿ ಯೋಜನೆಗೆ ಅರ್ಹರಲ್ಲದವರ ಪಟ್ಟಿಯನ್ನು ಕೂಡ ಆಹಾರ ಇಲಾಖೆ ತಯಾರಿಸಿದೆ.
ಗೃಹಲಕ್ಷ್ಮಿ ಯೋಜನೆಯ ಅನರ್ಹತೆ ಲೀಸ್ಟ್ ಹೀಗೆ ಚೆಕ್ ಮಾಡಿ
ನಿಮಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಬಂದಿಲ್ಲ ಅಂದ್ರೆ, ಅದಕ್ಕೆ ಕಾರಣ ಹಲವಾರು. ತಾಂತ್ರಿಕ ಕಾರಣದಿಂದ ಹಿಡಿದು, ನಿಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಹಾಕಲೇ ಇರೋದು ಕಾರಣವಿರಬಹುದು. ಇದರ ನಡುವೆ ನೀವು ಅರ್ಹರೋ, ಇಲ್ಲವೋ ಅಂತ ಚೆಕ್ ಮಾಡಲು, ಈ ಕೆಳಗಿನ ಹಂತವನ್ನು ಅನುಸರಿಸಿ.
- ನೀವುhttps://ahara.kar.nic.in/Home/EServicesಗೆ ಭೇಟಿ ನೀಡಬೇಕು.
- ಈ ಬಳಿಕ ನಿಮಗೆ ನಿಮ್ಮ ಹೆಸರು ಕ್ಯಾನ್ಸಲ್ ಹಾಗೂ ಅಮಾನತುಗೊಳಿಸಿರೋ ಬಗ್ಗೆ ಲೀಸ್ಟ್ ತೆರೆಯಲಿದೆ.
- ಇಲ್ಲಿ ನೀವು ನಿಮ್ಮ ಜಿಲ್ಲೆ, ತಾಲೂಕು ಆಯ್ಕೆ ಮಾಡಿ.
- ಈ ಬಳಿಕ ನೀವು ಯಾವಾಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೋ ಆ ತಿಂಗಳು, ವರ್ಷವನ್ನು ಆಯ್ಕೆಮಾಡಿಕೊಂಡು ಗೋ ಎಂಬಲ್ಲಿ ಕ್ಲಿಕ್ ಮಾಡಿ.
ಹೀಗೆ ಮಾಡಿದಾಗ ಗೃಹಲಕ್ಷ್ಮೀ ಯೋಜನೆಗೆ ಅನರ್ಹರಾಗಿರೋ, ಅರ್ಜಿ ಸಲ್ಲಿಸಿದ್ರೂ ಕ್ಯಾನ್ಸಲ್, ಅಮಾನತುಗೊಂಡಿರೋ ಹೆಸರುಗಳ ಪಟ್ಟಿಯನ್ನು ತೋರಿಸಲಿದೆ. ಅಲ್ಲಿ ನಿಮ್ಮ ಹೆಸರು ಇತ್ತು ಅಂದ್ರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಬರೋದಿಲ್ಲ. ಹೆಸರು ಇರದೇ ಇದ್ರೇ ನಿಮಗೆ ಹಣ ಈ ತಿಂಗಳು ಬಾರದೇ ಇದ್ರೂ ಮುಂದಿನ ತಿಂಗಳು ಒಟ್ಟಿಗೆ ಬರಲಿದೆ.