ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊ೦ದರಲ್ಲಿ ಆರೋಪಿಗಳಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶ ಮೂಲದ 18 ಮಂದಿ ಆರೋಪಿಗಳನ್ನು ಪೊಲೀಸರು ಬ೦ಧಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಬಲಿಯಾ ಜಿಲ್ಲೆ ಮತ್ತು ಘಾಜೀಯಾಪುರ ನಿವಾಸಿಗಳಾದ ಪೀಯುಶ್ ಕುಮಾರ್, ವಿನಯ್ ಕುಮಾರ್, ಬ್ರಿಜಿ ನಾರಾಯಣ, ರವೀಂದ್ರ, ಕೃಪ ಶಂಕರ್, ವಿವೇಕ್ ರಾಮ್, ಬದ್ಧ ರಾಮ್, ನಂದಿನಿ ರಾಮ್, ಕಿಶೋರ್ ಕುಮಾರ್, ಶಾಮ್ ಬಿಹಾರಿ ರಾಮ್, ಪ್ರೇಮಾಚಂದ ರಾಮ್, ಸತೇಂದ್ರ, ಭಗವಾನ್ ರಾಮ್, ಉಮೇಶ್ ರಾಮ್, ರಾಸ್ ಬಿಹಾರಿ ರಾಮ್, ಭಗೀರಥಿ ಚೌಧರಿ, ಸುನಿಲ್ ರಾಮ್, ನಂದಿಹಳ ರಾಮ್ ಬ೦ಧಿತ ಆರೋಪಿಗಳು.
ಇವರೆಲ್ಲರೂ 2017 ರಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಸಾಮೂಹಿಕವಾಗಿ ಪಾಲ್ಗೊಂಡಿದ್ದ ಆರೋಪವನ್ನು ಎದುರಿಸುತ್ತಿದ್ದಾರೆ. ವಿಚಾರಣೆ ಸಂದರ್ಭ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.
ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಶಿವಕುಮಾರ ಬಿ. ಹಾಗೂ ಉಪನಿರೀಕ್ಷಕ ಹರೀಶ್ ಎಂ.ಆರ್. ಅವರ ಮಾರ್ಗದರ್ಶನದಲ್ಲಿ, ಉಪನಿರೀಕ್ಷಕ ಮೂರ್ತಿ, ಹೆಡ್ ಕಾನ್ ಸ್ಟೆಬಲ್ ಗಣೇಶ್ ಪ್ರಸಾದ್, ಕಾನ್ ಸ್ಟೆಬಲ್ ಯೋಗೇಶ್ . ಸಿಬಂದಿ ವಿಜಯ್ ಕುಮಾರ್ ಮತ್ತು ಸುರೇಶ್ ಉಪ್ಪಾರ ಅವರನ್ನೊಳಗೊಂಡ ತಂಡ ಉತ್ತರ ಪ್ರದೇಶದಲ್ಲಿ ಆರೋಪಿಗಳಗಳನ್ನು ಬ೦ಧಿಸಿ ಬಂಟ್ವಾಳಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ನ್ಯಾಯಾಲಯವು ಆರೋಪಿಗಳಿಗೆ ದಂಡ ವಿಧಿಸಿ ಪ್ರಕರಣ ಮುಕ್ತಾಯ ಗೊಳಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.