Home ಕರಾವಳಿ ಸಂಸದ ಕಟೀಲ್‌ ಮನೆಗೆ NSUI ಕಾರ್ಯಕರ್ತರಿಂದ ಮುತ್ತಿಗೆ : ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್...

ಸಂಸದ ಕಟೀಲ್‌ ಮನೆಗೆ NSUI ಕಾರ್ಯಕರ್ತರಿಂದ ಮುತ್ತಿಗೆ : ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಖಂಡನೆ

0

ಡಿ.ಕೆ ಸುರೇಶ್ ದೇಶವಿರೋಧಿ ಹೇಳಿಕೆಯನ್ನು ಮರೆಮಾಚಲು ಬಿಜೆಪಿ ಸಂಸದರನ್ನು ಟಾರ್ಗೆಟ್ ಮಾಡಿದ ಕಾಂಗ್ರೆಸ್, ಸಂಸದ ಕಟೀಲ್‌ ಮನೆಗೆ NSUI ಕಾರ್ಯಕರ್ತರಿಂದ ಮುತ್ತಿಗೆ : ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಖಂಡನೆ


 

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಅವರ ಮನೆಗೆ ಎನ್‌ಎಸ್‌ಯುಐ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆಯನ್ನು ಬಿಜೆಪಿ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ತೀವ್ರವಾಗಿ ಖಂಡಿಸಿದ್ದಾರೆ.

“ಫೈನಾನ್ಸ್ ಕಮಿಷನ್ ವರದಿ ಪ್ರಕಾರ, ಆಯಾ ರಾಜ್ಯಗಳಿಗೆ ಅನುದಾನ ಬಿಡುಗಡೆಯಾಗುವುದು ಸಾಮಾನ್ಯ ನೀತಿ. ಅದರಲ್ಲಿ ತಾರತಮ್ಯ ಆಗಲು ಹೇಗೆ ಸಾಧ್ಯ..? ಆಯೋಗದ ಮಾರ್ಗದರ್ಶಿ ಸೂತ್ರ ಅನುಸರಿಸಿ ಅನುದಾನ ಬಿಡುಗಡೆಯಾಗುತ್ತದೆ ಎನ್ನುವುದು ಸಿದ್ದರಾಮಯ್ಯ ಅವರಿಗೂ ತಿಳಿದಿದೆ. ಸಂಸದ ಡಿ.ಕೆ ಸುರೇಶ್ ಅವರ ಪ್ರತ್ಯೇಕ ರಾಷ್ಟ್ರದ ಹೇಳಿಕೆಯಿಂದ ಆಗಿರುವ ಎಡವಟ್ಟು ತಪ್ಪಿಸಲು ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.‌ ಮುಖ್ಯಮಂತ್ರಿ ಮಾತು ಕೇಳಿ ಸಂಸದರ ಮನೆಗಳ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದ. ಅನುದಾನದಲ್ಲಿ ಕಡಿಮೆಯಾಗಿದ್ದರೆ ಆಯೋಗದ ಮುಂದೆ ಹೋಗಬೇಕೇ ವಿನಾ ಸಂಸದರ ಮನೆ ಮುಂದೆ ಪ್ರತಿಭಟಿಸಿದರೆ ಏನು ಲಾಭವಿದೆ. ಕಾಂಗ್ರೆಸ್ ಕಾರ್ಯಕರ್ತರ ಈ ರೀತಿಯ ನಡೆಯು ಖಂಡನೀಯ. ನಮ್ಮ ತೆರಿಗೆ ಹಣದಲ್ಲಿ ದೆಹಲಿಯಲ್ಲಿ ಶೋಕಿ ಮಾಡುತ್ತಿರುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಾರ್ಟಿ, ತಮ್ಮ ವೈಫಲ್ಯತೆಗಳನ್ನು ಮುಚ್ಚಿ ಹಾಕಲು ಬಿಜೆಪಿಯ ಮೇಲೆ ಗೂಬೆ ಕೂರಿಸೋ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಖಜಾನೆ ಬರಿದಾಗಿರುವುದು, ಅಭಿವೃದ್ಧಿ ಸ್ಥಗಿತವಾಗಿರುವುದು, ಬರ ಪರಿಹಾರ ಬಿಡುಗಡೆ ಮಾಡದಿರುವುದರಿಂದ ರಾಜ್ಯ ಸರಕಾರದ ವಿರುದ್ಧ ಭುಗಿಲೆದ್ದಿರುವ ಆಕ್ರೋಶದಿಂದ ಕಂಗೆಟ್ಟಿರುವ ಕಾಂಗ್ರೆಸ್ ತನ್ನ ಪಕ್ಷದ ಘಟಕಗಳ ಮೂಲಕ ಇಂತಹ ದಾರಿ ತಪ್ಪಿಸುವ ಪ್ರಚಾರದಲ್ಲಿ ತೊಡಗಿದೆ” ಎಂದು ಸರಕಾರವನ್ನು ಟೀಕಿಸಿದರು.

“ನಮ್ಮ ತೆರಿಗೆ ದುಡ್ಡನ್ನು ಬೇಕಾಬಿಟ್ಟಿ ಖರ್ಚು ಮಾಡುವುದನ್ನು ಬಿಟ್ಟು ಯುವಕರ, ಮಹಿಳೆಯರ, ರೈತರ ಆಶೋತ್ತರಗಳನ್ನು ಪೂರೈಸುವತ್ತ ಗಮನಹರಿಸಿ” ಎಂದು ಕಾಂಗ್ರೆಸ್ ಸರಕಾರದ ನಡೆಯನ್ನು ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here