ಮಂಗಳೂರು: ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ ಹಾಗೂ ಶ್ರೀ ವಿಠ್ಠಲ್ ಶೆಟ್ಟಿ ಫೌಂಡೇಶನ್ ಅರ್ಪಿಸುವ ಫಿಜಾ ಬೈ ನೆಕ್ಸಸ್ ಮಾಲ್ ಸಹಭಾಗಿತ್ವದಲ್ಲಿ ನಾಳೆ ಸಂಜೆ ಸಮಯ 4.00 ಗಂಟೆಗೆ ನಗರದ ಫಿಜಾ ಬೈ ನೆಕ್ಸಸ್ ಮಾಲ್ ನಲ್ಲಿ ಅಸ್ತ್ರ ಗ್ರೂಪ್ “ಮಿನಿ ಸಿನಿ ಅವಾರ್ಡ್” ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ.
ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟವು ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಿದ್ದು ಒಟ್ಟು ಇಪ್ಪತ್ತೇಳು ಕಿರು ಚಿತ್ರಗಳು ಭಾಗವಹಿಸಿದ್ದು ಹದಿನೇಳು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು. ಈ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ತುಳು ರಂಗಭೂಮಿ ಹಾಗೂ ಚಿತ್ರರಂಗದ ಹಿರಿಯ ಲೇಖಕರು, ನಿರ್ದೇಶಕರೂ ಆದ ಡಾ. ಶ್ರೀ ಸಂಜೀವ ದಂಡಕೇರಿ ಯವರು ನಡೆಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಕೃಷ್ಣ ಜೆ ಪಾಲೇಮಾರ್ ರವರು ವಹಿಸಲಿದ್ದಾರೆ.
ಈ ಸಂಧರ್ಭದಲ್ಲಿ ತುಳು ಚಿತ್ರರಂಗ ಹಾಗೂ ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ಶ್ರೀ ಲಕ್ಷ್ಮಣ್ ಮಲ್ಲೂರು ಇವರಿಗೆ “ಶ್ರೀ ವಿಠ್ಠಲ್ ಶೆಟ್ಟಿ ಜೀವಮಾನ ಸಾಧನೆಯ ಪ್ರಶಸ್ತಿ” ಪ್ರಧಾನ ಹಾಗೂ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವ ಶ್ರೀ ಅರ್ಜುನ್ ಭಂಡಾರ್ಕರ್ ಇವರಿಗೆ “ಕಾಪು ಶ್ರೀ ಲೀಲಾಧರ ಶೆಟ್ಟಿ ಸೇವಾ ರತ್ನ ಪ್ರಶಸ್ತಿ” ಪ್ರಧಾನ ನಡೆಯಲಿದೆ. ಉಳಿದಂತೆ ಹಲವು ರಾಜಕೀಯ ಗಣ್ಯರು ಹಾಗೂ ತುಳು ಹಾಗೂ ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಹಾಗೂ ನಟ,ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟವು ಸುಮಾರು 8 ವರ್ಷಗಳಿಂದ ಕಾರ್ಯನಿರ್ವಹಿಸುತಿದ್ದು ಹೆಸರಾಂತ ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜನೆ ಮಾಡುತ್ತಾ ಬಂದಿದೆ ಅಂತೆಯೇ ತುಳು ಶತ ಚಿತ್ರೋತ್ಸವ, ತುಳುವೆರೆ ತುಲಿಪು ಗ್ರಾಮೀಣ ಕ್ರೀಡಾಕೂಟ, ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದಂದು ರಕ್ತದಾನ,ನೇತ್ರದಾನ ಕಾರ್ಯಕ್ರಮ ಅದಲ್ಲದೇ ಹಲವಾರು ಅಶಕ್ತ ಹಾಗೂ ಅನಾರೋಗ್ಯದ ಪರಿಸ್ಥಿತಿಯಲಿದ್ದ ಕಲಾವಿದರಿಗೆ ಧನಸಹಾಯ ನೀಡುತ್ತಾ ತುಳುಚಿತ್ರ ರಂಗದ ಕಲಾವಿದರು ಹಾಗೂ ತಂತ್ರಜ್ಞರಿಗೆ ನೆರವಾಗುತ್ತ ಬಂದಿದೆ.