ಉಡುಪಿ ಜಿಲ್ಲೆಯ ಬ್ರಹ್ಮಾವರದ ಸಮೀಪ ಮದುಮಕ್ಕಳ ಜೊತೆ ಪೋಟೋ ತೆಗೆಸಿ ಬರುವದರಲ್ಲಿ ಕುರ್ಚಿಯ ಮೇಲಿಟ್ಟ ಲಕ್ಷಾಂತರ ಮೌಲ್ಯದ ಸೊತ್ತುಗಳಿದ್ದ ಬ್ಯಾಗ್ ನ್ನು ಕಳ್ಳನೊಬ್ಬ ಎಗರಿಸಿದ ಘಟನೆ ಬ್ರಹ್ಮಾವರದ ಶ್ಯಾಮಿಲಿ ಶನಾಯ ಹಾಲ್‌ನಲ್ಲಿ ಸಂಭವಿಸಿದೆ
ನೀಲಾವರದ ಜಯಶ್ರೀ ಸುರೇಶ್ ಎಂಬವರ ಮಗಳ ಮದುವೆ ಆರತಕ್ಷತೆ ಸಮಾರಂಭ ಬ್ರಹ್ಮಾವರ ಶ್ಯಾಮಿಲಿ ಶನಾಯ ಹಾಲ್‌ನಲ್ಲಿ ನಡೆದಿದ್ದು, ಈ ವೇಳೆ ಜಯಶ್ರೀ ತನ್ನ ಕೈಯಲ್ಲಿದ್ದ ಬ್ಯಾಗನ್ನು ಹಾಲ್ ಸ್ಟೇಜ್‌ನ ಕುರ್ಚಿಯ ಮೇಲೆ ಇಟ್ಟು ಮಗಳೊಂದಿಗೆ ಫೋಟೋ ತೆಗೆಸಿದ್ದರು. ಬಳಿಕ ಬಂದು ನೋಡಿದಾಗ ಬ್ಯಾಗ್ ಕಳವಾಗಿರುವುದು ಕಂಡುಬಂತು.
ಬ್ಯಾಗ್‌ನಲ್ಲಿ 2,40,000 ರೂ. ಮೌಲ್ಯದ ನಗದು ಹಾಗೂ ವಸ್ತುಗಳಿದ್ದವು ಎಂದು ತಿಳಿದುಬಂದಿದೆ. ಸಿಸಿಟಿವಿ ಫೂಟೇಜ್‌ನಲ್ಲಿ ಕಪ್ಪು ಶರ್ಟ್‌ನ ಹುಡುಗ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವುದನ್ನು ಸೆರೆಯಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.