Home ತಾಜಾ ಸುದ್ದಿ ನಾನು ಸತ್ತಿಲ್ಲ..! ಜೀವಂತವಾಗಿದ್ದೇನೆ ಬಾಲಿವುಡ್ ನಟಿ ಪೂನಂ ಪಾಂಡೆ ಸ್ಪಷ್ಟನೆ

ನಾನು ಸತ್ತಿಲ್ಲ..! ಜೀವಂತವಾಗಿದ್ದೇನೆ ಬಾಲಿವುಡ್ ನಟಿ ಪೂನಂ ಪಾಂಡೆ ಸ್ಪಷ್ಟನೆ

0

ಮುಂಬಯಿ: ನಟಿ ಕಂ ಮಾಡೆಲ್‌ ಪೂನಂ ಪಾಂಡೆ ನಿಧನರಾಗಿದ್ದಾರೆ ಎನ್ನುವ ಸುದ್ದಿ ಶುಕ್ರವಾರ(ಫೆ.2 ರಂದು) ಸೋಶಿಯಲ್‌ ಮೀಡಿಯಾದಲ್ಲಿ ಅವರ ಮ್ಯಾನೇಜರ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಸುದ್ದಿ ಎಲ್ಲರಿಗೂ ಆಘಾತವನ್ನೀಡಿತ್ತು.

ಪೂನಂ ಅವರು ಗರ್ಭಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಗುರುವಾರ ತಡರಾತ್ರಿ ಕಾನ್ಪುರದಲ್ಲಿ ನಿಧನ ಹೊಂದಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ವೊಂದನ್ನು ಹಂಚಿಕೊಂಡಿದ್ದರು.

 

ಆದರೆ ಈ ಸುದ್ದಿಯ ಬಗ್ಗೆ ಎಲ್ಲೂ ಕೂಡ ಅಧಿಕೃತವಾಗಿ ಮಾಹಿತಿ ಬಂದಿರಲಿಲ್ಲ. ನಟಿಯ ಕುಟುಂಬಸ್ಥರು ಕೂಡ ಯಾರ ಸಂಪರ್ಕಕ್ಕೆ ಬಾರದೇ ಇರುವುದು ಅನುಮಾನ ಹಾಗೂ ಗೊಂದಲಕ್ಕೆ ಕಾರಣವಾಗಿತ್ತು.

ಗರ್ಭಕಂಠದ ಕ್ಯಾನ್ಸರ್‌ ನಿಂದ ನಟಿ ನಿಧನರಾಗಿದ್ದಾರೆ ಎಂದು ಹೇಳಲಾಗಿತ್ತು.ಇದೀಗ ನಟಿ ತಾನು ಸತ್ತಿಲ್ಲ ಎಂದು ವಿಡಿಯೋ ಮೂಲಕ ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

“ನಾನು ಈ ರೀತಿ ಮಾಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಯಾರಿಗಾದರೂ ಇದರಿಂದ ನೋವು ಆಗಿದ್ದರೆ ಕ್ಷಮೆ ಇರಲಿ. ಹೌದು ನಾನು ಸತ್ತಿದ್ದೇನೆ ಎಂದು ಎಲ್ಲರಿಗೂ ಶಾಕ್‌ ಆಗುವಂತೆ ಮಾಡಿದೆ. ನನ್ನ ಸಾವು ಆಗಿದೆ ಎಂದು ಸುಳ್ಳು ಹೇಳಿದೆ. ಸಾವಿನ ಬಗ್ಗೆ ಸುದ್ದಿ ಹಬ್ಬಿಸಿದ್ದಕ್ಕೆ ಹೆಮ್ಮೆಯಿದೆ. ಗರ್ಭಕಂಠದ ಕ್ಯಾನ್ಸರ್‌ ನಿಧನವಾಗಿ ಕೊಲ್ಲುವ ಕಾಯಿಲೆ. ಇದರ ಬಗ್ಗೆ ನಾವು ಹೆಚ್ಚಾಗಿ ಮಾತನಾಡುತ್ತಿಲ್ಲ. ಇದರ ಜಾಗೃತಿಗಾಗಿ ನಾನು ಹೀಗೆ ಮಾಡಿದೆ. ಇದರ ಬಗ್ಗೆ ನಾವು ಹೆಚ್ಚಾಗಿ ಮಾತನಾಡಬೇಕು. ನಿಮ್ಮ ಬಳಿ ಏನಾದರೂ ಪ್ರಶ್ನೆಗಳಿಂದ ನಾನು ಲೈವ್‌ ಬಂದು ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here