Home ಕರಾವಳಿ ಪುತ್ತೂರು : ಉದ್ಯೋಗ ನೀಡುವುದಾಗಿ ಯುವತಿಗೆ ಲಕ್ಷಾಂತರ ರೂ ವಂಚನೆ

ಪುತ್ತೂರು : ಉದ್ಯೋಗ ನೀಡುವುದಾಗಿ ಯುವತಿಗೆ ಲಕ್ಷಾಂತರ ರೂ ವಂಚನೆ

0

ಪುತ್ತೂರು: ಉದ್ಯೋಗ ನೀಡುವುದಾಗಿ ಯುವತಿಯಿಂದ ಕಳೆದ 7 ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಹಣ ಪಡೆದು ವಂಚನೆ ಮಾಡಿರುವ ಘಟನೆ ನಡೆದಿದೆ. ಪುತ್ತೂರು ಹೊರವಲಯದ ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ನಿಶ್ಮಿತಾ ವಂಚನೆಗೊಳದಾವರು. 2023 ರ ಜೂ. 12ರಂದು ಪತ್ರಿಕೆಯೊಂದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿ ಬಳಿಕ ಅವರುಗಳು ಸೂಚಿಸಿದಂತೆ 2023ರ ಜೂ 28ರಿಂದ 2024ರ ಜ. 12 ರ ತನಕ ಹಂತ ಹಂತವಾಗಿ ಅಪರಿಚಿತ ಆರೋಪಿ ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 2,25,001 ಪಾವತಿ ಮಾಡಿದ್ದು, ಈವರೆಗೂ ನಿಶ್ಚಿತಾ ಅವರಿಗೆ ಉದ್ಯೋಗವನ್ನೂ ನೀಡದೆ, ಹಣವನ್ನು ಮೋಸದಿಂದ ಪಡೆದು ವಂಚಿಸಿರುತ್ತಾರೆ. ಈ ಕುರಿತು ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


LEAVE A REPLY

Please enter your comment!
Please enter your name here