Home ಕರಾವಳಿ ಮಂಗಳೂರು: ಯುವಕ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ..!

ಮಂಗಳೂರು: ಯುವಕ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ..!

0

ಮಂಗಳೂರು: ಯುವಕನೋರ್ವ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ಕರಂಗಲ್ಪಾಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ಕರಂಗಲ್ಪಾಡಿ ನಿವಾಸಿ, ಸಿಎ ವ್ಯಾಸಂಗ ಮಾಡುತ್ತಿದ್ದ ಕಾರ್ಲ್ ಲಾರೆನ್ಸ್ ಅರಾನ್ (23) ಎಂದು ಗುರುತಿಸಲಾಗಿದೆ. ಸಿಎ ಮಾಡುವುದರೊಂದಿಗೆ ಲಾರನ್ನ ಅರಾನ್ ತನ್ನ ತಂದೆಯೊಂದಿಗೆ ಸೇರಿಕೊಂಡು ಮ್ಯೂಚುವಲ್ ಫಂಡ್ ಸೇರಿದಂತೆ ಷೇರು ಮಾರ್ಕೆಟ್ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಷೇರ್ ಮಾರ್ಕೆಟ್ ರಜೆ ಇದ್ದುದರಿಂದ ಕಾರ್ಲ್ ಲಾರೆನ್ಸ್ ಅರಾನ್ ಮನೆಯಲ್ಲೇ ಉಳಿದಿದ್ದರು. ಮಧ್ಯಾಹ್ನ ಊಟದ ಬಳಿಕ ಕೊಠಡಿ ಸೇರಿದ್ದ ಅವರು ಸಂಜೆ 4 ಗಂಟೆಯ ಬಳಿಕ ಅವರನ್ನು ಕರೆದರೂ ಅವರು ಸ್ಪಂದಿಸಿರಲಿಲ್ಲ. ಫೋನ್ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ರಾತ್ರಿ 7 ಗಂಟೆಯಾದರೂ ಕೊಠಡಿಯಿಂದ ಹೊರ ಬಂದಿರದ ಹಿನ್ನೆಲೆಯಲ್ಲಿ ಮನೆಯವರು ಕದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.ಬಳಿಕ ಪೊಲೀಸರು ಆಗಮಿಸಿ ರಾತ್ರಿ ಬಾಗಿಲು ಒಡೆದು ನೋಡಿದಾಗ, ಲಾರೆನ್ಸ್ ಬೆಟ್ ಶೀಟನ್ನೇ ಕಿಟಕಿಗೆ ಕಟ್ಟಿ ಕತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಆತ್ಮಹತ್ಯೆಗೆ ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ.

LEAVE A REPLY

Please enter your comment!
Please enter your name here