Home ಕರಾವಳಿ ಭಾರತೀಯ ಪ್ರವಾಸಿ ಪರಿಷತ್ ಕುವೈಟ್ – ಕರ್ನಾಟಕ ಘಟಕದ ವತಿಯಿಂದ ಡಾ. ಅಮೃತ ಸೋಮೇಶ್ವರವರಿಗೆ ನುಡಿ...

ಭಾರತೀಯ ಪ್ರವಾಸಿ ಪರಿಷತ್ ಕುವೈಟ್ – ಕರ್ನಾಟಕ ಘಟಕದ ವತಿಯಿಂದ ಡಾ. ಅಮೃತ ಸೋಮೇಶ್ವರವರಿಗೆ ನುಡಿ ನಮನ

0
ಸಾಹಿತ್ಯ ಲೋಕದ ಸಾಧನಾ ಶಿಲ್ಪಿ, ಕನ್ನಡ ಮತ್ತು ತುಳು ಭಾಷೆಯ ಮೇರು ಸಾಹಿತಿ, ‌ಹಿರಿಯ ವಿದ್ವಾಂಸರು, ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಾಡಿನ‌ ಕೀರ್ತಿ ಹೆಚ್ಚಿಸಿ, ಇತ್ತೀಚೆಗಷ್ಟೇ ನಮ್ಮನ್ನಗಲಿದ ಡಾ. ಅಮೃತ ಸೋಮೇಶ್ವರರವರನ್ನು ಸ್ಮರಿಸಿ ಗೌರವಿಸುವ ಸಲುವಾಗಿ, ಅಮೃತರಿಗೆ ನುಡಿ ನಮನ ಎಂಬ ಕಾರ್ಯಕ್ರಮವನ್ನು  ಭಾರತೀಯ ಪ್ರವಾಸಿ ಪರಿಷತ್ ಕುವೈಟ್ – ಕರ್ನಾಟಕ ಘಟಕದ ವತಿಯಿಂದ, ಜನವರಿ 19, 2024 ನೇ ಶುಕ್ರವಾರದಂದು, ಸಂಜೆ 6:00 ಗಂಟೆಗೆ, ಆರ್ಟ್ ಸರ್ಕಲ್ ಹಾಲ್ ಅಬ್ಬಾಸಿಯಾದಲ್ಲಿ, ಅಧ್ಯಕ್ಷರಾದ ಶ್ರೀ ರಾಜ್ ಭಂಡಾರಿಯವರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಕುವೈಟ್’ನ ಉದ್ಯಮಿ ಹಾಗೂ ಬಂಟರ ಸಂಘ ಕುವೈಟ್‌’ನ ಅಧ್ಯಕ್ಷರಾದ ಶ್ರೀ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವಾನ್ವಿತ ಅಥಿತಿಗಳಾಗಿ ಹವ್ಯಾಸಿ ಯಕ್ಷಗಾನ ಕಲಾವಿದರಾದ ಶ್ರೀ ರಫೀಕುಧ್ಧೀನ್ ಹಾಗೂ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಯಧುನಾಥ್ ಆಳ್ವರವರು ಉಪಸ್ಥಿತರಾಗಿದ್ದರು
ನೂರಾರು ಮಂದಿ ಕಲೆ, ಸಾಹಿತ್ಯ, ಸಂಶೋಧನಾಸಕ್ತರಿಗೆ ಸದಾ ಕಾಲ ಪ್ರೇರಕರು, ಮಾರ್ಗದರ್ಶಕರಾಗಿ ಗುರುತಿಸಿಕೊಂಡು, ಕರಾವಳಿ ಕರ್ನಾಟಕದ ಯಕ್ಷಗಾನ, ಜಾನಪದ, ದೈವಾರಾಧನೆ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ ಡಾ ಅಮೃತ ಸೋಮೇಶ್ವರರವರ ಹುಟ್ಟು ಸಾವಿನ ನಡುವಿನ ಪ್ರಯಾಣದ ಜೀವನ ಚರಿತ್ರೆ ಹಾಗೂ ಅವರ ಸಾಧನೆಯ ಸಂಪೂರ್ಣ ಚಿತ್ರಣವನ್ನು, ಹವ್ಯಾಸಿ ಯಕ್ಷಗಾನ ಕಲಾವಿದರಾದ ಶ್ರೀ ರಫೀಕುಧ್ಧೀನ್’ರವರು ನುಡಿ ನಮನ ನೀಡುವ ಮೂಲಕ ವಿವರಿಸಿದರು ಹಾಗೂ ಶ್ರೀಮತಿ ಅಶ್ವಿತ ಸುರೇಂದ್ರ ಪೂಜಾರಿಯವರು ವಿದ್ವಾಂಸರ ವ್ಯಕ್ತಿ ಪರಿಚಯ ಮಾಡಿದರು.
ಕುವೈಟ್‌’ನಲ್ಲಿರುವ ಇತರ ಸಾಂಸ್ಕೃತಿಕ ಸಂಘಗಳಾದ ತುಳು ಕೂಟ, ಬಿಲ್ಲವ ಸಂಘ, ಬಂಟರ ಸಂಘ, ಮೊಗವೀರ ಸಂಘ ಕುವೈಟ್‌ ಇದರ ವಕ್ತಾರರಿಂದ ಡಾ. ಅಮೃತ ಸೋಮೇಶ್ವರರಿಗೆ ನುಡಿ ನಮನ ಸಲ್ಲಿಸಲಾಯಿತು.
ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಭಿಕರಿಂದ ವಿದ್ವಾಂಸರಿಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ನುಡಿ ನಮನ ಕಾರ್ಯಕ್ರಮ ಮುಕ್ತಾಯವಾಯಿತು

 

LEAVE A REPLY

Please enter your comment!
Please enter your name here