ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ದೇವಾಲಯಗಳನ್ನು ಸ್ವಚ್ಛಗೊಳಿಸೋಣ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಹಿನ್ನೆಲೆಯಲ್ಲಿ ಬಿಜೆಪಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಮಂಗಳೂರಿನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆಕೊಟ್ಟಿರುವ ಸ್ವಚ್ಛ ತೀರ್ಥ ಅಭಿಯಾನಕ್ಕೆ ದೇಶದಾದ್ಯಂತ ಅಭೂತಪೂರ್ವ ಬೆಂಬಲ ದೊರಕಿದ್ದು ರಾಮಭಕ್ತರಲ್ಲಿ ನವ ಉತ್ಸಾಹವನ್ನು ಮೂಡಿಸಿದೆ. ಈ ಅಭಿಯಾನವು ಜನವರಿ 22 ರಂದು ಕೊನೆಗಾಣಲಿದೆ.
ಈ ಸಂದರ್ಭದಲ್ಲಿ ಮ.ನ.ಪಾ ಸದಸ್ಯರಾದ ಸಂದೀಪ್ ಗರೋಡಿ, ಪ್ರಕಾಶ್ ಪೂಜಾರಿ ಗರೋಡಿ , ಪೂಜಾ, ಅಭಿಷೇಕ್ ರೈ, ವಸಂತ್ ಪೂಜಾರಿ, ಕೌಷಿಕ್ ಗರೋಡಿ, ಮನ್ವಿತ್ ಗರೋಡಿ, ಹೃತಿಕ್ ಶೆಟ್ಟಿ, ಸಂಜು, ತ್ರಿಶೂಲ್, ಈಶ್ವರ್ ಶೆಟ್ಟಿ, ಅಜಿತ್ ಬೋಪಯ್ಯ, ದಯಾನಂದ್ ಸನ್ಯಾಸಿಗುಡ್ಡೆ, ಅನುಷ್ ರೈ, ಮಿಥಿಲ್ ಅಡ್ಯಾರ್, ಸಾಕ್ಷಾತ್ ಶೆಟ್ಟಿ ಕಾವೂರು, ವಿನೀತ್ ಪುತ್ರನ್, ಕ್ಷೇತ್ರದ ಅರ್ಚಕರು, ಮತ್ತಿತರರು ಉಪಸ್ಥಿತರಿದ್ದರು.