ಸುಳ್ಯ ಸಮೀಪದ ಸೋಣಂಗೇರಿ ಪೇಟೆಯಲ್ಲಿ ಅಯೋಧ್ಯೆ ಕಾರ್ಯಕ್ರಮಕ್ಕೆ ಶುಭ ಕೋರಿ ಅಳವಡಿಸಿದ್ದ ಬ್ಯಾನರ್ನಲ್ಲಿ ಹಾಕಲಾದ ಹೆಸರಿಗೆ ಮಸಿ ಬಳಿದಿರುವ ಘಟನೆ ಬೆಳಕಿಗೆ ಬಂದಿದೆ. ಬ್ಯಾನರ್ನ ಕೆಳಭಾಗದಲ್ಲಿ 15 ಹೆಸರುಗಳಿದ್ದು, ಈ ಪೈಕಿ 14 ಹೆಸರುಗಳಿಗೆ ಮಸಿ ಬಳಿಯಲಾಗಿದೆ. ವಾರದ ಹಿಂದೆ ಸುಳ್ಯ ನಗರದಲ್ಲಿ ಅಳವಡಿಸಿದ್ದ ಅಯೋಧ್ಯೆ ಬ್ಯಾನರ್ಗೂ ಹಾನಿ ಮಾಡಲಾಗಿತ್ತು. ಘಟನೆ ಖಂಡಿಸಿ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಕೆಲವು ದಿನಗಳ ಬಳಿಕ ಅಡ್ಕಾರ್ನಲ್ಲಿ ಅಳವಡಿಸಲಾಗಿದ್ದ ಬ್ಯಾನರ್ಗೂ ಹಾನಿ ಮಾಡಲಾಗಿತ್ತು.