ರಾಜ್ಯದಲ್ಲಿ ಲವ್ ಜಿಹಾದ್ ಮತ್ತೆ ಸದ್ದು ಮಾಡಿದ್ದು ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಅಪ್ರಾಪ್ತ ಹಿಂದೂ ಬಾಲಕಿಗೆ ಪ್ರೀತಿ ಹೆಸರಲ್ಲಿ ಅನ್ಯ ಕೋಮಿನ ಯುವಕ ಖೆಡ್ಡ ತೋಡಿದ್ದು, ಅಪ್ರಾಪ್ತ ಬಾಲಕಿಯನ್ನು ಪ್ರೀತಿ ಹೆಸರಲ್ಲಿ ಪುಲಾಯಿಸಿ ಅನ್ಯ ಧರ್ಮಿಯ ಅಪ್ರಾಪ್ತ ಯುವಕ ಕರೆದೋಯ್ದಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಘಟನೆ ನಡೆದಿದ್ದು, ಕೆ.ಆರ್.ಪೇಟೆ ಪಟ್ಟಣದ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿ ಹೆಸರಲ್ಲಿ ಮುಸ್ಲಿಂ ಯುವಕನೊಬ್ಬ ಕರೆದೊಯ್ದಿದ್ದ ಎಂದು ಹೇಳಲಾಗುತ್ತಿದ್ದು,ಪಟ್ಟಣದ 19 ವರ್ಷದ ಯುವಕ ಸೈಯದ್ ತಬ್ರೀಜ್ ವಿರುದ್ದ ಲವ್ ಜಿಹಾದ್ ಆರೋಪ ಕೇಳಿಬಂದಿದೆ.
ಇದರಿಂದ ಅಪ್ರಾಪ್ತ ಬಾಲಕಿ ಪೋಷಕರಿಂದ ಪಟ್ಟಣ ಪೊಲೀಸ್ ಠಾಣೆಗೆ ಅನ್ಯ ಧರ್ಮೀಯ ಯುವಕನ ವಿರುದ್ದ ದೂರು ದಾಖಲಿಸಿದ್ದು, ದೂರಿನ ಬಳಿಕ ಬಾಲಕಿ ಹಾಗು ಯುಕನನ್ನು ಪತ್ತೆ ಹಚ್ಚಿ ಪಟ್ಟಣ ಪೊಲೀಸರು ಕರೆ ತಂದಿದ್ದಾರೆ.
ಹಿಂದೂ ಸಂಘಟನೆಗಳಿಂದ ಠಾಣೆ ಮುಂದೆ ಪ್ರತಿಭಟನೆ
ಪಟ್ಟಣದಲ್ಲೂ ಅನ್ಯಧರ್ಮೀಯರಿಂದ ಲವ್ ಜಿಹಾದ್ ಮೂಲಕ ಹಿಂದೂ ಯುವತಿರ ಟಾರ್ಗೆಟ್ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿಹಿಂದೂ ಸಂಘಟನೆಗಳಿಂದ ಠಾಣೆಯ ಮುಂದೆ ಪ್ರತಿಭಟನೆ ನಡೆಯಿತು ಪ್ರಕರಣವನ್ನು NIAಗೆ ವಹಿಸುವಂತೆ ಒತ್ತಾಯ ಕೇಳಿಬಂದಿತು.ಬಾಲಕಿ ಕರೆದೊಯ್ದ ಅಪ್ರಾಪ್ತ ಬಾಲಕನ ವಿರುದ್ದ ಪೊಲೀಸರಿಂದ ಇದೀಗ ಪೋಸ್ಕೋ ಪ್ರಕರಣ ದಾಖಲಾಗಿದ್ದು,ಈ ಪ್ರಕರಣದ ಹಿಂದೆ ಅನ್ಯ ಕೋಮಿನವರು ಲವ್ ಜಿಹಾದ್ ಗೆ ಪ್ರಚೋದನೆ ನೀಡ್ತಿರೋ ಆರೋಪ ಕೇಳಿಬಂದಿದ್ದು ಈ ಕುರಿತು ತನಿಖೆಗೆ ಹಿಂದೂ ಸಂಘಟನೆಗಳು ಅಗ್ರಹಿಸಿವೆ.