ಪುತ್ತೂರು: ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಯಾಗಿದ್ದ ಪ್ರೊಫೆಸರ್ ಎ.ಎಸ್. ರಾಮಕೃಷ್ಣರವರ ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಶಿಕ್ಷೆಗೊಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕ ಡಾ. ರೇಣುಕಾಪ್ರಸಾದ್ ಕೆ.ವಿ.ಯವರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ. ನ್ಯಾಯಾಲಯಕ್ಕೆ ಶ್ಯೂರಿಟಿ ಕೊಟ್ಟ ಬಳಿಕ ಅವರು ಬಿಡುಗಡೆಯಾಗಲಿದ್ದು, ನಾಳೆ ಅದು ನಡೆಯುವ ಸಾಧ್ಯತೆ ಇದೆ.
ಕಳೆದ ಅಕ್ಟೋಬರ್ 5ರಂದು ಆಕಾಶಭವನ ಶರಣ್ ಹೊರತುಪಡಿಸಿ ಡಾ. ರೇಣುಕಾಪ್ರಸಾದ್ ಮತ್ತು ಇತರ ಆರೋಪಿಗಳ ಬಂಧನವಾಗಿತ್ತು. ಮೂರು ತಿಂಗಳು ಕಳೆದ ಹಿನ್ನಲೆಯಲ್ಲಿ ಎಲ್ಲಾ ಬಂಧಿತರಿಗೂ ಜಾಮೀನು ದೊರೆತಿರುವುದಾಗಿ ತಿಳಿದು ಬಂದಿದೆ.