Home ತಾಜಾ ಸುದ್ದಿ ಸಿನಿಮೀಯ ಮಾದರಿಯಲ್ಲಿ ಕಾರಲ್ಲೇ ಮದುವೆಯಾದ ಪ್ರೇಮಿಗಳು..!

ಸಿನಿಮೀಯ ಮಾದರಿಯಲ್ಲಿ ಕಾರಲ್ಲೇ ಮದುವೆಯಾದ ಪ್ರೇಮಿಗಳು..!

0

ಪೋಷಕರ ವಿರೋಧದ ನಡುವೆಯೂ ಇಬ್ಬರು ಪ್ರೇಮಿಗಳು ಕಾರಿನಲ್ಲಿ ಸಿನಿಮೀಯ ಮಾದರಿಯಲ್ಲಿ ಮದುವೆ ಮಾಡಿಕೊಂಡಿರುವ ಘಟನೆ  ಬಳ್ಳಾರಿಯಲ್ಲಿ ನಡೆದಿದೆ.


ಆಗಾಗೆ ತೆಕ್ಕಲಕೋಟೆಯ ಸೋದರ ಮಾವನ ಮನೆಗೆ ರಜೆ ದಿನಗಳಲ್ಲಿ ಬರುತ್ತಿದ್ದಾ ಅಮೃತ, ಮಾವನ ಮನೆಯಲ್ಲಿ ಹಲವಾರು ದಿನಗಳು ಇರುತ್ತಿದ್ದಳು. 2017 ರಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ಅಧ್ಯಾವಾಗ ಶಿವಪ್ರಸಾದ್ ಎನ್ನು ಯುವಕ ಆ ಹುಡಿಗಿಯನ್ನು ನೋಡಿದ್ದಾನೋ, ಆಗ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಆಗಾ ಪ್ರಾರಂಭವಾದ ಪ್ರೀತಿ ಮುಂದುವರೆದು ಮದುವೆ ಮಾಡಿಕೊಳ್ಳವ ಹಂತಕ್ಕೆ ಬಂದು ತಲುಪಿದೆ. ಈ ಕುರಿತು ಇಬ್ಬರ ಮನೆಯಲ್ಲಿ ವಿಷಯ ಗೊತ್ತಾದ ಕೂಡಲೇ ಅಮೃತಳನ್ನು ಅವಳ ಸ್ವಂತ ಊರಾದ ಕೊಪ್ಪಳ ನಗರದ ಭಾಗ್ಯನಗರಕ್ಕೆ ಕಳಿಸಿದ್ದಾರೆ. ಈ ಬೆಳವಣಿಗೆಯಿಂದ ಧೃತಿಗೆಟ್ಟ ಇಬ್ಬರು ಪ್ರೇಮಿಗಳು ಮನೆಯಿಂದ ಹೊರ ಬಂದು ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಸಿನಿಮೀಯಾ ಮಾದರಿಯಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಈ ಯುವ ಪ್ರೇಮಿಗಳು ಮೇಜರ್ ಆಗಿರುವುದರಿಂದ ಇಬ್ಬರಿಗೆ ಮದುವೆ ಮಾಡಿಸಿ ಎಂದು ನಿನ್ನ ರಾತ್ರಿ ತೆಕ್ಕಲಕೋಟೆಯ ಪೋಲೀಸ್ ಠಾಣೆಗೆ ಹೋಗಿದ್ದಾರೆ. ಠಾಣೆಯ ಪೋಲಿಸರು ಮುಂಜಾನೆ ಬನ್ನಿ ಮದುವೆ ವಿಷಯ ಮಾತನಾಡೋಣ ಎಂದು ಹೇಳಿದಾಗ ಕಾರಿನಲ್ಲಿಯೇ ಮದುವೆಯಾಗಿದಾರೆ.ಮುಂಜಾನೆ ಮತ್ತೆ ಮಾದುವೆ ಮಾಡಿಕೊಂಡು ಬಂದಿದ್ದೆವೆ ನಮಗೆ ರಕ್ಷಣೆ ಕೊಡಿ ಎಂದು ಠಾಣೆಗೆ ತೆರಳಿದಾಗ ಯುವತಿ ಅಮೃತಳನ್ನು ಬಳ್ಳಾರಿಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಿದ್ದಾರೆ. ಮುಂಜಾನೆ ಶಿವಪ್ರಸಾದ್ ಸಾಂತ್ವನ ಕೇಂದ್ರಕ್ಕೆ ತೆರಳಿದಾಗ ಆ ಅಮೃತಳನ್ನು ನೋಡಲು ಸಹ ಬಿಟ್ಟಿಲ್ಲ.ಎಸ್ಸಿ ಸಮುದಾಯದನಾದ ಯುವಕ ಶಿವ ಪ್ರಸಾದನ್ನು, ಯುವತಿ‌ ಅಮೃತಳ ಮನೆಯವರು ಒಪ್ಪುತ್ತಿಲ್ಲ.ಈ ಇಬ್ಬರು ಪ್ರೇಮಿಗಳಿಗೆ ಜಾತಿಯೇ ದೊಡ್ಡ ಅಡ್ಡಗೋಡೆಯಾಗಿ ಪರಿಣಮಿಸಿದೆ. ಅಮೃತಳ ಸೋದರ ಮಾವನಿಂದ ಯುವಕ ಶಿವಪ್ರಸಾದ್ ಗೆ ಜೀವ ಬೆದರಿಕೆ ಇರುವುದು ಸಹ ತಿಳಿದುಬಂದಿದೆ.

ಅದೇನೆ ಇರಲ್ಲಿ ಇಬ್ಬರು ಪ್ರೇಮಿಗಳು ದೂರವಾಗಬಾರದು ಎನ್ನುವ ಉದ್ದೇಶದಿಂದ ಮದುವೆ ಮಾಡಿಕೊಂಡಿದ್ದಾರೆ. ಅದ್ದರಿಂದ ಎರಡು ಕುಟುಂಬದ ಸದಸ್ಯರು ಒಪ್ಪಿಕೊಂಡು ಅವರನ್ನು ಸ್ವೀಕರಿಸುವ ಕಾರ್ಯ ಮಾಡಲಿ ಎನ್ನುವುದು ಎಲ್ಲಾರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here