ಮಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮ ಮಂದಿರದ ಉದ್ಘಾಟನೆ ನಿದ್ದೆಗೆಡಿಸಿದ್ದು.ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿರುವ ಸಂತಸದಲ್ಲಿ ಸಮಸ್ತ ಹಿಂದೂ ಸಮಾಜ ಇದೆ ಆದರೆ ಇಂತಹ ಶುಭ ಸಂದರ್ಭವನ್ನು ಸಹಿಸಲಾಗದೆ 31 ವರ್ಷಗಳ ಹಿಂದೆ ನಡೆದ ರಾಮ ಜನ್ಮ ಭೂಮಿ ಹೋರಾಟದ ಕೇಸುಗಳಿಗೆ ಮರು ಜೀವ ನೀಡುವ ಹೆಸರಿನಲ್ಲಿ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡಲು ರಾಜ್ಯ ಕಾಂಗ್ರೆಸ್ ಸರಕಾರ ಮುಂದಾಗಿರುವುದು ಖಂಡನೀಯ.
“ಸರ್ವಜನಾಂಗದ ಶಾಂತಿಯ ತೋಟ” ನಿರ್ಮಾಣ ಮಾಡುತ್ತೇವೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿ ಈಗ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದು ಅತೀವ ನೋವು ತಂದಿದ್ದು ಕಾಂಗ್ರೆಸ್ ತನ್ನ ದ್ವೇಷದ ರಾಜಕಾರಣವನ್ನು ಇಂದಿಗೇ ಕೊನೆಗೊಳಿಸಿದರೆ ಒಳಿತು ಇಲ್ಲಿದಿದ್ದಲ್ಲಿ ನಾವು ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಬದ್ಧ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಾಂಗ್ರೆಸ್ ಸರ್ಕಾರದ ವಿರುದ್ದ ಗುಡುಗಿದ್ದು , ಅಂತೆಯೇ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಸೇರಿದಂತೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು “ನಾನೂ ರಾಮ ಭಕ್ತ ನನ್ನನ್ನೂ ಬಂಧಿಸಿ ಸಿದ್ದರಾಮಯ್ಯನವರೇ” ಎಂಬ ಘೋಷಣೆಯನ್ನು ಒಳಗೊಂಡ ಪ್ರೊಫೈಲ್ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕಾಂಗ್ರೆಸ್ ಸರಕಾರದ ವಿರುದ್ಧ ಹೊಸ ಅಭಿಯಾನ ಶುರು ಆರಂಭಿಸಿದ್ದಾರೆ.