ರಾಮಜನ್ಮಭೂಮಿ ಹೋರಾಟಗಾರ ‘ಶ್ರೀಕಾಂತ್ ಪೂಜಾರಿ’ ಬಂಧನ ಪ್ರಕರಣ: ಬರೋಬ್ಬರಿ 15 ಕೇಸ್ ದಾಖಲು
ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿದೆ. ಈ ಬಳಿಕ ಅವರ ವಿರುದ್ಧ ಹುಬ್ಬಳ್ಳಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೋಬ್ಬರಿ 15 ಪ್ರಕರಣಗಳನ್ನು ದಾಖಲಿಸಿರೋದಾಗಿ ತಿಳಇದು ಬಂದಿದೆ.ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣವನ್ನು ಬಿಜೆಪಿಯ ವಿವಿಧ ನಾಯಕರು ಖಂಡಿಸಿದ್ದಾರೆ.ಇದೊಂದು ರಾಜಕೀಯ ಪ್ರೇರಿತ ನಡೆಯೆಂಬುದಾಗಿ ಕಿಡಿಕಾರಿದ್ದಾರೆ.ಈ ಬೆನ್ನಲ್ಲೇ ಶ್ರೀಕಾಂತ್ ಪೂಜಾರಿ ವಿರುದ್ಧ ಹುಬ್ಬಳ್ಳಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ 15 ಕೇಸ್ ಗಳನ್ನು ದಾಖಲಿಸಲಾಗಿದೆ. ಹಳೇ ಹುಬ್ಬಳ್ಳಿ ಮತ್ತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 11 ಕೇಸ್ ದಾಖಲಾಗಿದ್ದಾವೆ.ಇನ್ನೂ ಕಸಬಾ ಪೊಲೀಸ್ ಠಾಣೆಯಲ್ಲಿ ಶ್ರೀಕಾಂತ್ ಪೂಜಾರಿ ವಿರುದ್ಧ 3 ಕೇಸ್ ದಾಖಲಾಗಿದ್ರೇ, ಶಹರ ಪೊಲೀಸ್ ಠಾಣೆಯಲ್ಲಿ 1 ಕೇಸ್ ದಾಖಲಾಗಿದೆ.ಶ್ರೀಕಾಂತ್ ಪೂಜಾರಿ ವಿರುದ್ಧ ಹುಬ್ಬಳ್ಳಿಯ ವಿವಿಧ ಠಾಣೆಯಲ್ಲಿ ದಾಖಲಾಗಿರುವಂತ 15 ಕೇಸ್ ಗಳಲ್ಲಿ 11 ಪ್ರಕರಣಗಳು ಅಕ್ರಮ ಸಾರಾಯಿ ಮಾರಾಟ ಕುರಿತು ದಾಖಲಾಗಿರುವಂತ ಪ್ರಕರಣಗಳಾಗಿದ್ದಾವೆ.