ʻಗೃಹಲಕ್ಷ್ಮಿʼ ಕ್ಯಾಂಪ್ ನಲ್ಲಿ ತಪ್ಪದೇ ಈ ಕೆಲಸ ಮಾಡಿದ್ರೆ ಖಾತೆಗೆ ಬರುತ್ತೆ ಹಣ
ಗೃಹಲಕ್ಷ್ಮಿ’ ಯೋಜನೆಯ ವಿಶೇಷ ಶಿಬಿರ ರಾಜ್ಯಾದ್ಯಂತ ಆರಂಭಗೊಂಡಿದ್ದು, ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇರುವವರು ತಪ್ಪದೇ ಪ್ರಮುಖ ಕೆಲಸಗಳನ್ನು ಮಾಡಿದ್ರೆ ಈ ತಿಂಗಳಿನಿಂದಲೇ ಖಾತೆಗೆ ಹಣ ಜಮಾ ಆಗಲಿದೆ.ಈ ಕುರಿತು ಮಾಹಿತಿ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಈ ಶಿಬಿರ 3 ದಿನಗಳ ಕಾಲ ನಡೆಯಲಿದ್ದು, ಶಿಬಿರದಲ್ಲಿ ಆಧಾರ್ ಜೋಡಣೆ, ಬ್ಯಾಂಕಿಗೆ ಸಂಬಂಧಿಸಿದ ತೊಂದರೆ, ಇಕೆವೈಸಿ ಅಪ್ಡೆಡ್, ಹೊಸ ಬ್ಯಾಂಕ್ ಖಾತೆ ಸಂಪರ್ಕ ಮುಂತಾದ ಅಡತಡೆಗಳನ್ನು ನಿವಾರಿಸಿ, ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ತೊಂದರೆ ಅನುಭವಿಸುತ್ತಿರುವ ಮಹಿಳೆಯರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.ಕ್ಯಾಂಪ್‍ಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ, ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಆಧಾರ್ ಜೋಡಣೆ,. ಇ-ಕೆವೈಸಿ ನವೀಕರಣ, ಗೃಹಲಕ್ಷ್ಮಿ ಅರ್ಜಿಯ ಸ್ಥಿತಿ ಪರಿಶೀಲನೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹಾರ ಒದಗಿಸಲಾಗುತ್ತದೆ.ಫಲಾನುಭವಿಗಳು ನಿಗಧಿತ ದಿನಗಳಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಸೌಲಭ್ಯ ಪಡೆದುಕೊಳ್ಳಬಹುದು.ಈ ಸಮಸ್ಯೆಗಳಿಗೆ ಪರಿಹಾರಆಧಾರ್ ಜೋಡಣೆಬ್ಯಾಂಕ್ ಸಮಸ್ಯೆಇ-ಕೆವೈಸಿಹೊಸ ಬ್ಯಾಂಕ್ ಖಾತೆ ಆರಂಭಜೊತೆಗೆ ತರಬೇಕಾದ ದಾಖಲೆಗಳುತಮ್ಮ ಆಧಾರ್ ಕಾರ್ಡ್‌ಪತಿಯ ಆಧಾರ್ ಕಾರ್ಡ್‌ಪಡಿತರ ಚೀಟಿಬ್ಯಾಂಕ್ ಪಾಸ್ ಪುಸ್ತಕ