Home ಕರಾವಳಿ ಮುಸ್ಲಿಂ ವಿಧ್ಯಾರ್ಥಿಗಳು ಹಿಜಬ್ ಧರಿಸಿ ಬಂದರೆ, ಹಿಂದು ಹೆಣ್ಣು ಮಕ್ಕಳು ಕೇಸರಿ ಶಲ್ಯವನ್ನು ಹಾಕಿ ಕಾಲೇಜಿಗೆ...

ಮುಸ್ಲಿಂ ವಿಧ್ಯಾರ್ಥಿಗಳು ಹಿಜಬ್ ಧರಿಸಿ ಬಂದರೆ, ಹಿಂದು ಹೆಣ್ಣು ಮಕ್ಕಳು ಕೇಸರಿ ಶಲ್ಯವನ್ನು ಹಾಕಿ ಕಾಲೇಜಿಗೆ ಹೋಗಲು ಸಿದ್ದರಿದ್ದಾರೆ- ಅರುಣ್ ಕುಮಾರ್ ಪುತ್ತಿಲ

0

ಪುತ್ತೂರು: ರಾಜ್ಯ ಸರಕಾರ ಹಿಜಬ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದು, ಮುಸ್ಲಿಂ ವಿಧ್ಯಾರ್ಥಿಗಳು ಹಿಜಬ್ ಧರಿಸಿ ಬಂದರೆ ಇದಕ್ಕೆ ಪ್ರತಿಯಾಗಿ ನಮ್ಮ ಹಿಂದು ಹೆಣ್ಣು ಮಕ್ಕಳು ಮುಂದಿನ ದಿನ ಕೇಸರಿ ಶಲ್ಯವನ್ನು ಹಾಕಿ ಶಾಲೆಗೆ ಮತ್ತು ಕಾಲೇಜಿಗೆ ಹೋಗಲು ಸಿದ್ದರಿದ್ದಾರೆ. ಹಿಂದು ಸಮಾಜದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದರೆ ಸರಕಾರವನ್ನು ಉರುಳಿಸಲು ಹಿಂದು ಸಮಾಜ ಸಿದ್ದವಾಗಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.

ಪುತ್ತೂರಿನಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಹಿಂದು ಸಮಾಜಕ್ಕೆ ಶಕ್ತಿಯನ್ನು ತುಂಬುವ ಪ್ರಯತ್ನ ಮತ್ತು ಧಾರ್ಮಿಕ ವ್ಯವಸ್ಥೆಯ ಜೊತೆಗೆ ಇಡಿ ಸಮಾಜಕ್ಕೆ ಶಕ್ತಿಯನ್ನು ಕೊಡಬೇಕು. ಧರ್ಮ ಸಂಸ್ಕೃತಿಯ ಮುಂದೆ ಇರುವ ಹಲವಾರು ಸವಾಲುಗಳಿಗೆ ಅತ್ಯಂತ ಸಂಘಟಿತವಾಗಿದ್ದೇವೆ ಎನ್ನುವ ಸಂದೇಶ ಕೊಡುವ ನಿಟ್ಟಿನಲ್ಲಿ ಮತ್ತು ಲೋಕಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಅನ್ನುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ. ತಿಮ್ಮಪ್ಪನ ಸಾನಿಧ್ಯಕ್ಕೆ ಭಕ್ತಿಯ ಕಾಣಿಕೆ ಸಮರ್ಪಿಸಿದರೆ ನಮ್ಮ ಬದುಕು ಪಾವನ ಆಗುತ್ತದೆ. ತಿರುಪತಿಯಲ್ಲಿ ಶ್ರೀನಿವಾಸನ ದರುಶನವನ್ನು ಅತ್ಯಂತ ಹತ್ತಿರದಿಂದ ಕಾಣಲು ಅಸಾಧ್ಯವಾದ ಸಂದರ್ಭದಲ್ಲಿ ಇಡಿ ಸಮಾಜಕ್ಕೆ ಶ್ರೀನಿವಾಸನ ಅನುಗ್ರಹ ಕರುಣಿಸಲು ಮತ್ತು ಲೋಕಕಲ್ಯಾಣಕ್ಕಾಗಿ ಇವತ್ತಿನ ಕಲ್ಯಾಣೋತ್ಸವ ಮಾಡುತ್ತಿದ್ದೇವೆ.

ನಮ್ಮ ಕೊನೆಯ ಉಸಿರು ಇರುವ ತನಕ ಧರ್ಮವನ್ನು ಉಳಿಸುವ ಸಂಕಲ್ಪದ ಕಾಲಗಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಒಂದು ಕಡೆದ ಧರ್ಮರಕ್ಷಣೆ ಮಾಡುವ ಕಾರ್ಯಕರ್ತರನ್ನು ಗಡಿಪಾರು ಮಡಿ ಕೇಸು ದಾಖಲು ಮಾಡಿ ಮಾಡುವ ಕೆಲಸ ಸರಕಾರ ಮಾಡುತ್ತಿದೆ. ಇನ್ನೊಂದು ಕಡೆ ಧರ್ಮದ ಮುಂದಿರುವ ಯಾವುದೇ ಸವಾಲುಗಳಿದ್ದರೂ ಅದನ್ನು ಸ್ವೀಕಾರ ಮಾಡಿ ಮತ್ತೆ ನಮ್ಮ ಧರ್ಮತನವನ್ನು ಎತ್ತರಕ್ಕೆ ಏರಿಸುವ ಸಂಕಲ್ಪದ ಕಾಲಗಟ್ಟದಲ್ಲಿದ್ದೇವೆ ಎಂದರು.

LEAVE A REPLY

Please enter your comment!
Please enter your name here