ಉಳ್ಳಾಲ : ಶ್ರೀ ರಾಮ ಭಜನಾ ಮಂದಿರ (ರಿ )ಉಳ್ಳಾಲ ಇದರ ಪುನರ್ ಪ್ರತಿಷ್ಠ ಬಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವು ತಂತ್ರಿ ವರ್ಯರು ಶ್ರೀ ಕಾಂತ್ ಭಟ್ ಉಪಸ್ಥಿತಿಯಲ್ಲಿ ಶ್ರೀ ಮನೋಜ್ ಸಾಲಿಯಾನ್ ಅಧ್ಯಕ್ಷರು ಮೊಗವೀರ ಸಂಘ ಉಳ್ಳಾಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.



ಶ್ರೀ ಎಸ್. ಕೆ ಉಳ್ಳಾಲ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು ಮುಖ್ಯ ಅತಿಥಿಗಳಾಗಿ ಶ್ರೀ ಸದಾನಂದ್ ಬಂಗೇರ ಉದ್ಯಮಿ ಶ್ರೀ ಸಂದೀಪ್ ಪುತ್ರನ್, ದಾಸ್ ಚಾರಿಟೇಬಲ್ ಸೇವಾ ಸಂಸ್ಥೆಯ ಲಯನ್ ಶ್ರೀ ಅನಿಲ್ ದಾಸ್, ಶ್ರೀ ಪ್ರಸಾಂತ್ ಬಂಗೇರ, ಶ್ರೀ ಯಶ ವಂತ್, ಪಿ. ಅಮೀನ್, ಶ್ರೀ ಮಧು ಅಮೀನ್. ಮುಂತಾದ ಗಣ್ಯರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದ ಮಾರುತಿ ಜನಸೇವಾ ಸಂಘ (ರಿ )ಮೊಗವೀರ ಪಟ್ಣ, ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬ್ರದರ್ಸ್ ಯುವಕ ಮಂಡಲ, ಮೊಗವೀರ ಪಟ್ಣ ಮತ್ತು ಹಾರ್ಮೋನಿಯಂ ಮಾಸ್ಟರ್ ರಾಮಚಂದ್ರ ಕರ್ಕೇರ ಉಳ್ಳಾಲ ಇವರನ್ನು ಸನ್ಮಾನಿಸಲಾಯಿತು.
RJ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು ವಂದಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿಗಳಿಂದ ಹಾಸ್ಯಮಯ ನಾಟಕ ನಡೆಯಿತು.