ನೀವೇನಾದ್ರೂ ಮೀನು ಪ್ರಿಯರಾಗಿದ್ರೆ ಎಚ್ಚರ! ಎಚ್ಚರ! ಎಚ್ಚರ! ಬೀಚ್ ಹೋಗಿ ಮೀನು ಸವಿಯುವ ಪ್ಲಾನ್ ಏನಾದ್ರೂ ಇದ್ರೆ ..ನೀವು ಕ್ಯಾನ್ಸರ್ ಗೆ ಆಹ್ವಾನ ನೀಡಿದಂತೆ.ಅರ್ರೆ ಬೀಚ್ ಗೂ ಮೀನಿಗೂ ಕ್ಯಾನ್ಸರ್ ಗೂ ಏನು ಸಂಬಂಧ ಅಂತಿರಾ ಈ ಸ್ಡೋರಿ ನೀವು ನೋಡ್ಲೇ ಬೇಕು.
ಇನ್ನು ಕ್ರಿಸ್ಮಸ್, ಹೊಸ ವರ್ಷಾಚರಣೆ ಅಂತ ಸಾಲು…ಸಾಲು ರಜೆಗಳು ಬರುತ್ತಿವೆ. ಹೀಗಾಗಿ ಪ್ರವಾಸಿ ಕೇಂದ್ರಗಳಲ್ಲಿ ಜನಜಂಗುಳಿ ಇರೋದು ಸಹಜ. ಅದರಲ್ಲೂ ಕಡಲ ತೀರದ ವೀಕ್ಷಣೆಗೆ ಸಾವಿರಾರು ಮಂದಿ ಆಗಮಿಸುತ್ತಾರೆ. ಹೊರರಾಜ್ಯದಿಂದಲೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಅದರಲ್ಲೂ ಶಾಲಾ ಮಕ್ಕಳು ಕರಾವಳಿಯ ಉಡುಪಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಕಡಲತೀರಕ್ಕೆ ಬಂದ ಬಳಿಕ ಅಲ್ಲಿ ಮೀನಿನ ಖಾಧ್ಯ ಇದ್ದೇ ಇರುತ್ತದೆ. ಹೀಗಾಗಿ ವ್ಯಾಪಾರಸ್ಥರು ಲಾಭದ ಲೆಕ್ಕಾಚಾರದಲ್ಲಿ ಬೀಚ್ ಬಳಿಯೇ ಫಿಶ್ ಲ್ಯಾಂಡ್, ಮೀನ್ ಲಂಚ್ ಹೀಗೆ ವಿವಿಧ ನಾನ್ ವೆಚ್ ಆಹಾರ ಮಳಿಗೆ ಹಾಕಿದ್ದಾರೆ. ಪ್ರವಾಸಿಗರ ಕಣ್ಣು ಕುಕ್ಕುವಂತೆ ಮೀನಿಗೆ ಕಡುಕೆಂಪು ಬಣ್ಣದ ಮಸಾಲೆ ಹಚ್ಚಿ ಹೊರಗೆ ಸಾಲಾಗಿ ಇಡಲಾಗಿದೆ.ಹೀಗೆ ಮಸಾಲೆ ಹಚ್ಚಿ ಇಡಲಾದ ಮೀನುತಿಂದ್ರೆ ಆರೋಗ್ಯ ಹದಗೆಡೋದು ಗ್ಯಾರೆಂಟಿ.
ಇದು ಕೇವಲ ಮೀನು ಅಷ್ಟೇ ಅಲ್ಲ… ಚಿಕನ್ ಕಬಾಬ್, ಗೋಬಿ ಮಂಚೂರಿ , ಫಿಂಗರ್ ಚಿಪ್ಸ್, ಹೀಗೆ ಕರಿದ ಆಹಾರ ತಿನಿಸು ಸಖತ್ ಡೇಂಜರ್ ಅನ್ನೋದು ಕನ್ ಫರ್ಮ್ ಆಗಿದೆ. ದೂರಿನ ಮೇಲೆ ಬೀಚ್ ಸಮೀಪಇರುವ ಸುಮಾರು 28 ಆಹಾರ ಮಳಿಗೆ ಮೇಲೆ ತಪಾಸಣೆ ನಡೆಸಿದ ನಗರಸಭೆ ಪೌರಾಯುಕ್ತ ರಾಯಪ್ಪ ಹಾಗೂ ಅಧಿಕಾರಿಗಳ ತಂಡಕ್ಕೆ ತಪಾಸಣೆ ವೇಳೆ ಬರೋಬ್ಬರಿ 6ವರೆ ಕೆಜಿ ಟೇಸ್ಟಿಂಗ್ ಪೌಡರ್ ಸಿಕ್ಕಿದೆ. ಅಷ್ಟೇ ಅಲ್ಲ ರಾಸಾಯನಿಕ ಬಣ್ಣಗಳು ಪತ್ತೆಯಾಗಿದೆ. ಈ ಪ್ರಮಾಣದ ಟೇಸ್ಟಿಂಗ್ ಪೌಡರ್ ಕಂಡು ಪೌರಾಯುಕ್ತ ರಾಯಪ್ಪಶಾಕ್ ಆಗಿದ್ದಾರೆ. ಹೀಗೆ ಸಿಕ್ಕಿರುವ ಟೇಸ್ಟಿಂಗ್ ಪೌಡರ್, ರಾಸಾಯನಿಕ ಬಣ್ಣಗಳನ್ನು ಸೀಜ್ ಮಾಡಿ ಬುದ್ದಿವಾದ ಹೇಳಿ ಪ್ರತೀ ದಿನ ಬಂದು ತಪಾಸಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಪೌರಾಯುಕ್ತ ರಾಯಪ್ಪ.
ಒಟ್ಟಾರೆ ಈ ಪ್ರಮಾಣದಲ್ಲಿ ರಾಸಾಯನಿಕ ಬಳಸಿ, ಹೆಚ್ಚಿನ ಪ್ರಮಾಣದಲ್ಲಿ ಟೇಸ್ಟಿಂಗ್ ಪೌಡರ್ ಬಳಸಿ ಪ್ರವಾಸಿಗರ ಪ್ರಾಣದ ಜೊತೆ ಆಟವಾಡುತ್ತಿರುವ ವ್ಯಾಪಾರಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬದಲು ಬುದ್ದಿವಾದ ಹೇಳಿ ಯಾವ ಬದಲಾವಣೆ ಸಾಧ್ಯ.