ಸುವರ್ಣಸೌಧದಲ್ಲಿ ಸದನ ನಡೆಯುತ್ತಿರುವ ಸಂದರ್ಭದಲ್ಲಿಯೇ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮದ್ಯ ಪ್ರಿಯರು ಕೂಡ ಪ್ರತಿಭಟನೆ ನಡೆಸುತ್ತಿದ್ದರು. ಅವರ ಬಳಿಗೆ ತೆರಳಿದಂತ ಕಾರ್ಮಿಕ ಸಚಿವ ಸಂತೋಷ್ ಲಾಡ್, ಅವರ ಬೇಡಿಕೆ ಕೇಳಿ ಶಾಕ್ ಆಗಿದ್ದಾರೆ. ಅದೇನು ಅಂತ ಮುಂದೆ ಓದಿ.
ಬೆಳಗಾವಿಯ ಸುವರ್ಣಸೌಧದ ಬಳಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮದ್ಯಪ್ರಿಯರು ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನಾ ಸ್ಥಳಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತೆರಳಿ, ಅವರ ಬೇಡಿಕೆ ವಿಚಾರಿಸಿದರು.
ಈ ವೇಳೆಯಲ್ಲಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ಸದಸ್ಯರು, ಮದ್ಯಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು. ಮದ್ಯಮಾರಾಟದಿಂದ ಬರುವ ಆದಾಯದ ಶೇ.10ರಷ್ಟು ಮದ್ಯ ಪ್ರಿಯರಿಗಾಗಿ ಮೀಸಲಿಡಬೇಕು ಎಂದರು.
ಇದಷ್ಟೇ ಅಲ್ಲದೇ ಲಿವರ್ ಸಮಸ್ಯೆಯಿಂದ ಬಳಲುತ್ತಿರೋರಿಗೆ ಚಿಕಿತ್ಸೆಯನ್ನು ಸರ್ಕಾರವೇ ಕೊಡಿಸುವಂತೆ ಆಗಬೇಕು. ಕುಡುಕ ಎಂಬ ಪದವನ್ನು ನಿಷೇಧಿಸಿ, ಮದ್ಯಪ್ರಿಯರು ಅಂತ ಮಾಡಬೇಕು ಎಂದು ಒತ್ತಾಯಿಸಿದರು.
ಒಬ್ಬರಿಗೆ ಒಂದು ಕ್ವಾರ್ಟರ್ ನಿಗದಿ ಮಾಡಬೇಕು. ಬಾರ್ ಗಳು ಸ್ವಚ್ಛವಾಗಿರೋದಿಲ್ಲ. ಅವುಗಳಲ್ಲಿ ಸ್ವಚ್ಛತೆ ಕಾಪಾಡೋ ನಿಟ್ಟಿನಲ್ಲಿ ಕ್ರಮವಹಿಸಬೇಕು. ಅಲ್ಲದೇ ಬಾರ್ ಬಳಿಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದರು.
ಮದ್ಯಪ್ರಿಯರ ಭವನ ಸ್ಥಾಪಿಸಬೇಕು. ಡಿ.31 ಅನ್ನು ಮದ್ಯಪಾನ ಪ್ರಿಯರ ದಿನವನ್ನಾಗಿ ಘೋಷಿಸಬೇಕು. ಮದ್ಯ ಸೇವನೆಯಿಂದ ಮೃತಪಟ್ಟರೇ 10 ಲಕ್ಷ ಪರಿಹಾರ ನೀಡಬೇಕು. ಮದ್ಯಪ್ರಿಯರ ಕುಟುಂಬದಲ್ಲಿ ವಿವಾಹವಾದರೇ 2 ಲಕ್ಷ ರೂ ಪ್ರೋತ್ಸಾಹ ಧನ ನೀಡಬೇಕು ಎಂಬುದಾಗಿ ಆಗ್ರಹಿಸಿದರು.