ನವದೆಹಲಿ: ಇಂದು ಲೋಕಸಭಾ ಸಂಸತ್ ಕಲಾಪದ ವೇಳೆಯಲ್ಲಿ ಭಾರೀ ಭದ್ರತಾ ಲೋಪ ಕಂಡು ಬಂದಿದೆ. ಲೋಕಸಭೆ ಕಲಾಪದ ವೇಳೆಯಲ್ಲೇ ನುಗ್ಗಿದಂತ ಇಬ್ಬರು ಬಂಧಿತ ಆರೋಪಿಗಳಲ್ಲಿ ಓರ್ವ ಕರ್ನಾಟಕ ಮೈಸೂರಿನವನು ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಬಂಧಿತ ಆರೋಪಿಯಲ್ಲಿ ಕರ್ನಾಟಕ ಓರ್ವ ಆರೋಪಿ ಸೇರಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.
ಸಂಸತ್ತಿನಲ್ಲಿ ಇಂದು ನಡೆದ ಭದ್ರತಾ ಉಲ್ಲಂಘನೆಯ ಪ್ರಮುಖ ಆರೋಪಿ ಸಾಗರ್ ಶರ್ಮಾ ಹಾಗೂ ನೀಲಂ ಕೌರ್ ಎಂಬ ಯುವತಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಸದನದ ಹೊರಗೆ ಪ್ರತಿಭಟನೆ ನಡಿಸಿದಂತ ಮತ್ತಿಬ್ಬರು ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಹೀಗೆ ದೆಹಲಿ ಪೊಲೀಸರು ವಶಕ್ಕೆ ಪಡೆದಿರುವಂತ ಆರೋಪಿ ಸಾಗರ್ ಶರ್ಮಾ ಮೈಸೂರಿನ ವಿಜಯನಗರದವನು ಎಂಬುದಾಗಿ ತಿಳಿದು ಬಂದಿದೆ. ಆತ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಸಹಿಯನ್ನು ಹೊಂದಿದ್ದಂತ ಸಂಸದರ ಶಿಫಾರಸ್ಸಿನ ಪಾಸ್ ಪಡೆದಿದ್ದರು ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.