ಮಂಗಳೂರು: ಪುರಾತನ ದೇವಾಲಯಗಳಲ್ಲಿ ಒಂದಾಗಿರುವ ಕರಾವಳಿಯ ಪ್ರಸ್ಥಿದ್ದ ಬೋಳಾರದ ಮಹತೋಭಾರ ಶ್ರೀ ಮಂಗಳಾದೇವಿ ದೇವಾಲಯದ ಹೆಸರನ್ನು, ಗೂಗಲ್ ಮ್ಯಾಪ್ ನಲ್ಲಿ ಯಾರೋ ತಿರುಚಿರುವ ವಿಚಾರ ಬೆಳಕಿಗೆ ಬಂದಿದೆ.
ಧಾರ್ಮಿಕ ದತ್ತಿ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಟ್ಟಿರುವ ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ “ಮಂಗಳಾಂಬೆ”ಯಿಂದಲೆ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ ಎಂಬ ಇತಿಹಾಸವಿದೆ.
ಆದರೆ ದೇವಸ್ಥಾನದ ಹೆಸರನ್ನು “ಬೋಳಾರ್ ಶೇಕ್ ಉಮರ್ ಸಾಹೇಬ್ ಕಾಂಪೌಂಡು” ಎಂದು ತಿದ್ದಿರುವುದು ದೇವಾಲಯದ ಆಡಳಿತ ಮಂಡಳಿ ಯ ಗಮನಕ್ಕೆ ಬಂದಿದ್ದು ಈ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ.
ದೇವಾಲಯದ ಪವಿತ್ರತೆಗೆ ಧಕ್ಕೆ ತರುವ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ದೇವಸ್ಥಾನದ ಹೆಸರು ತಿರುಚಲಾಗಿದ್ದು, ತಪ್ಪಿತಸ್ಥರನ್ನು ಗುರುತಿಸಿ ಸೂಕ್ತ ಕ್ರಮ ಜರುಗಿಸಬೇಕು. ಗೂಗಲ್ ನಕ್ಷೆಯಲ್ಲಿ “ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ” ಎಂದು ಹೆಸರನ್ನು ಸರಿಪಡಿಸಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದೆ.