Home ತಾಜಾ ಸುದ್ದಿ ಮದುವೆಗೆ ಮುಂಚೆಯೇ ವರದಕ್ಷಿಣೆ ಕಿರುಕುಳ; ಯುವ ವೈದ್ಯೆ ಆತ್ಮಹತ್ಯೆ

ಮದುವೆಗೆ ಮುಂಚೆಯೇ ವರದಕ್ಷಿಣೆ ಕಿರುಕುಳ; ಯುವ ವೈದ್ಯೆ ಆತ್ಮಹತ್ಯೆ

0

ತಿರುವನಂತಪುರಂ: ವರದಕ್ಷಿಣೆ ಪಿಡುಗಿಗೆ ಕೇರಳ ಯುವ ವೈದ್ಯೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಲವ್ ಮಾಡಿದ್ದರೂ ಆಕೆಯ ಪ್ರಿಯಕರನ ಮನೆಯವರು ಮದುವೆಗೆ ವರದಕ್ಷಿಣೆ ಬೇಡಿಕೆ ಇಟ್ಟಿದ್ದು ಅದನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ಡಾ.ಶಹಾನಾ ಸಾವಿನ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಹಾಗೂ ವರದಕ್ಷಿಣೆ ತಡೆ ಕಾಯ್ದೆಯಡಿ ಪೊಲೀಸರು ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಡಾ ಶಹಾನಾ ತನ್ನ ತಾಯಿ ಮತ್ತು ಇಬ್ಬರು ಒಡಹುಟ್ಟಿದವರ ಜೊತೆ ವಾಸಿಸುತ್ತಿದ್ದರು. ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ತಂದೆ ಎರಡು ವರ್ಷಗಳ ಹಿಂದೆ ನಿಧನರಾದರು. ಅವರು ಡಾ ಇಎ ರುವೈಸ್ ಅವರೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಡಾ.ರುವಾಯಿಸ್ ಅವರ ಕುಟುಂಬ ವರದಕ್ಷಿಣೆಯಾಗಿ 150 ಚಿನ್ನಾಭರಣ, 15 ಎಕರೆ ಜಮೀನು ಮತ್ತು ಬಿಎಂಡಬ್ಲ್ಯು ಕಾರಿಗೆ ಬೇಡಿಕೆ ಇಟ್ಟಿದೆ ಎಂದು ಡಾ.ಶಹಾನಾ ಕುಟುಂಬ ಆರೋಪಿಸಿದೆ. ಶಹಾನಾ ಅವರ ಕುಟುಂಬವು ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಹೇಳಿದಾಗ, ಆಕೆಯ ಗೆಳೆಯನ ಕುಟುಂಬವು ಮದುವೆಯನ್ನು ರದ್ದುಗೊಳಿಸಿತು ಎಂದು ಮಾತೃಭೂಮಿ ವರದಿ ಮಾಡಿದೆ . ಇದರಿಂದ ಮನನೊಂದ ಯುವ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕ ಸೂಸೈಡ್ ನೋಟ್‌ನಲ್ಲಿ “ಎಲ್ಲರಿಗೂ ಹಣ ಮಾತ್ರ ಬೇಕು” ಎಂದು ಬರೆಯಲಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here