Home ಕರಾವಳಿ ಅನುಮಾನಾಸ್ಪದವಾಗಿ ವಿದ್ಯಾರ್ಥಿಯ ಶವ ಪತ್ತೆ : ಮುಖಕ್ಕೆ ಪ್ಲಾಸ್ಟಿಕ್ ಬಿಗಿದು, ಕೈ ಕಟ್ಟಿದ ಸ್ಥಿತಿಯಲ್ಲಿ ಪತ್ತೆ

ಅನುಮಾನಾಸ್ಪದವಾಗಿ ವಿದ್ಯಾರ್ಥಿಯ ಶವ ಪತ್ತೆ : ಮುಖಕ್ಕೆ ಪ್ಲಾಸ್ಟಿಕ್ ಬಿಗಿದು, ಕೈ ಕಟ್ಟಿದ ಸ್ಥಿತಿಯಲ್ಲಿ ಪತ್ತೆ

0

ಮೈಸೂರಿನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದ್ದು, ಮಾನಸಗಂಗೋತ್ರಿ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ನಲ್ಲಿ ಈ ಘಟನೆ ಸಂಭವಿಸಿದೆ. ಹೈದರಾಬಾದ್ ಮೂಲದ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಅಕ್ಷಜ್ (18) ಶವ ಪತ್ತೆಯಾಗಿದೆ.

 

ಮೃತ ಅಕ್ಷಜ್ ಮುಖಕ್ಕೆ ಪ್ಲಾಸ್ಟಿಕ್ ಕವರ್ ಬಿಗಿಯಲಾಗಿದೆ. ಕೈಗಳನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಅಕ್ಷಯ ಶವ ಪತ್ತೆಯಾಗಿದೆ.
ಮೃತನನ್ನು ಹೈದರಾಬಾದ್ ಮೂಲದ ಪ್ರಥಮ ಬಿ ಎಸ್ ಸಿ ವಿದ್ಯಾರ್ಥಿ ಅಕ್ಷಜ್ (18) ಎಂದು ಹೇಳಲಾಗುತ್ತಿದೆ.

ಮುಖಕ್ಕೆ ಪ್ಲಾಸ್ಟಿಕ್ ಬಿಗಿಯಲಾಗಿದ್ದು ಹಾಗೂ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿರುವುದರಿಂದ ಮೇಲ್ನೋಟಕ್ಕೆ ಇದನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತಂತೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here