Home ಕರಾವಳಿ ಮಂಗಳೂರು:ರೇಟಿಂಗ್ ನೀಡುವ ಟಾಸ್ಕ್: 27.56 ಲ.ರೂ. ವಂಚನೆ

ಮಂಗಳೂರು:ರೇಟಿಂಗ್ ನೀಡುವ ಟಾಸ್ಕ್: 27.56 ಲ.ರೂ. ವಂಚನೆ

0

ಮಂಗಳೂರು: ಟೆಲಿಗ್ರಾಂ ಆ್ಯಪ್ ಮೂಲಕ ಪಾರ್ಟ್ ಟೈಂ ಜಾಬ್ ಎಂದು ರೇಟಿಂಗ್ ನೀಡುವ ಟಾಸ್ಕ್ ಕೊಟ್ಟು 27.56 ಲ.ರೂ. ವಂಚಿಸಿರುವ ಘಟನೆ ನಡೆದಿದೆ. ದೂರುದಾರರಿಗೆ ಜೂ. 19ರಂದು ಟೆಲಿಗ್ರಾಂ ಆ್ಯಪ್‌ನಲ್ಲಿ ಹೊಟೇಲ್ ಮತ್ತು ಹೋಂ ಸ್ಟೇಗಳಿಗೆ ರೇಟಿಂಗ್ ನೀಡುವ ಟಾಸ್ಕ್ ಪೂರ್ಣಗೊಳಿಸುವ ಪಾರ್ಟ್ ಟೈಂ ಜಾಬ್ ಮಾಡಿ ಹಣ ಗಳಿಸಬಹುದು ಎಂದು ಅಪರಿಚಿತ ವ್ಯಕ್ತಿಯಿಂದ ಮೆಸೇಜ್ ಬಂದಿತ್ತು. ಅದನ್ನು ನಂಬಿದ ದೂರುದಾರರು Aditi MMT guru ಎಂಬ ಗ್ರೂಪ್‌ನಲ್ಲಿ 30 ಟಾಸ್ಕ್ ಪೂರ್ಣಗೊಳಿಸಿದ್ದರು. ಅವರಿಗೆ ಅಪರಿಚಿತ ವ್ಯಕ್ತಿ 900 ರೂ.ಗಳನ್ನು ಲಾಭಾಂಶವೆಂದು ನೀಡಿದ್ದು, ಅದೇ ದಿನ ಮತ್ತೆ 11,000 ರೂ. ಹೂಡಿಕೆ ಮಾಡಿಸಿ, ಒಮ್ಮೆ 20,000 ರೂ. ಹಾಗೂ ಇನ್ನೊಮ್ಮೆ 70,000 ರೂ. ಗಳನ್ನು ಲಾಂಭಾಂಶವೆಂದು ನೀಡಿದ್ದ ಇದೇ ರೀತಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ನಂಬಿಸಿ ಜೂ.19ರಿಂದ ಆ. 26ರವರೆಗೆ ಹಂತಹಂತವಾಗಿ ಒಟ್ಟು 27,56,129 ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಅನಂತರ ಯಾವುದೇ ಲಾಭಾಂಶ ನೀಡದೆ ವಂಚಿಸಿದ್ದಾನೆ. ಈ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

LEAVE A REPLY

Please enter your comment!
Please enter your name here