ಮಂಗಳೂರು: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ದ. ಕ ಜಿಲ್ಲಾ ಘಟಕ ಹಾಗೂ ಇನ್ನಿತರ ಇಲಾಖೆ, ಪರಿಷತ್ ಗಳ ಸಹಯೋಗದಲ್ಲಿ 2024 ಜನವರಿಯಲ್ಲಿ ಪಣಂಬೂರು ಬೀಚ್ ನಲ್ಲಿ ನಡೆಸುವ ಜಾನಪದ ಕಡಲೋತ್ಸವ, ಜಾನಪದ ಪ್ರದರ್ಶನ ಮತ್ತು ಆಹಾರ ಮೇಳ ದ ಪೂರ್ವ ಯೋಜಿತ ವಾಗಿ ಡಿಸೆಂಬರ್ 11 ರಂದು ಸೋಮವಾರ ಮಂಗಳೂರು ಪುರಭವನದಲ್ಲಿ ಬೆಳಿಗ್ಗೆ 8ರಿಂದ ಸಂಜೆ 6ಗಂಟೆ ವರೆಗೆ ಜಾನಪದ ಸ್ಪರ್ಧೆ ನಡೆಯಲಿದೆ.ಮುಕ್ತ ವಿಭಾಗ ದಲ್ಲಿ ಸ್ಪರ್ಧೆ ನಡೆಯಲಿದ್ದು, ಕಾಲೇಜು ಹಾಗೂ ಸಂಘ ಸಂಸ್ಥೆ ಗಳ ಜಾನಪದ ತಂಡ ಗಳು ಭಾಗವಹಿಸಲಿದೆ. ಸ್ಪರ್ಧೆಯು ಕರಾವಳಿ ಕರ್ನಾಟಕದ ಜಾನಪದ ಕಲೆ, ಸಂಸ್ಕೃತಿ, ಆಚಾರ ವಿಚಾರವನ್ನ ಪ್ರತಿಬಿಂಬಿಸುವ ವಿಷಯಾದಾರಿತ ವಾಗಿರುತ್ತದೆ.ಕಾರ್ಯಕ್ರಮದ ಉದ್ಘಾಟನೆಯು ಬೆಳಿಗ್ಗೆ 10ಘಂಟೆಗೆ ನಡೆಯಲಿದೆ.



ಮಂಗಳೂರು ಮಹಾ ನಗರಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿ ಗಳಾಗಿ ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ತುಳು ಸಾಹಿತ್ಯ ಅಕಾಡೆಮಿ ನಿಕಟ ಪೂರ್ವಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್, ಉದ್ಯಮಿ ರಮೇಶ್ ಕುಮಾರ್, ಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ್, ದ.ಮ ತುಳು ಪೀಠ ತುಳು ಸ್ನಾತಕೋತ್ತರ ವಿಭಾಗ ಸಂಯೋಜಕರು ಶ್ರೀ ಡಾ.ಮಾದವ MKರವರುಗಳ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ ದ.ಕ ಜಿಲ್ಲಾ ಘಟಕದ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

